HEALTH TIPS

ಕುಂಬಳೆ: ವ್ಯಾಪಾರಿಯ ಬ್ಲ್ಯಾಕ್‍ಮೇಲ್‍ಗೆ ಯತ್ನಿಸಿದ ಮಹಿಳೆ ಸೇರಿದಂತೆ ಮೂವರ ಬಂಧನ

ಕುಂಬಳೆ: ವಿದ್ಯುತ್ ಬಿಲ್ ಪಾವತಿಸಲು ಸಾಲ ಪಡೆದಿದ್ದ 5ಸಾವಿರ ರೂ.ಮೊತ್ತ ಹಿಂತಿರುಗಿಸುವುದಾಗಿ ಭರವಸೆ ನೀಡಿ ಉದ್ಯಮಿಯೊಬ್ಬರನ್ನು ಮನೆಗೆ ಕರೆಸಿ ಹಣ ಎಗರಿಸಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಕುಬಣೂರು ನಿವಾಸಿ ರಿಜ್ವಾನಾ (28)ಸೇರಿದಂತೆ ಮೂವರನ್ನು ಕುಂಬಳೆ ಠಾಣೆ ಎಸ್. ಐ ಅನೂಪ್‍ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.


ರಿಜ್ವಾನಾ ಅವರ ಪತಿ ಹಸನ್ ಆಸಿಫ್ (33), ಸಂಬಂಧಿಕ ಹಾಗೂ ಮೊಗ್ರಾಲ್ ನಿವಾಸಿ ಮೊಹಮ್ಮದ್ ಸಿರಾಜ್ (32) ಬಂಧಿತರು. 

ಮುಟ್ಟಂ ಬಂಗರದ 64ರ ಹರೆಯದ ವ್ಯಾಪಾರಿಯೊಬ್ಬರು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಈ ಬಂಧನ ನಡೆದಿದೆ. ಸಾಲ ಪಡೆದಿದ್ದ ಹಣ ವಾಪಾಸು ನೀಡುವುದಾಗಿ ಮಹಿಳೆ  ತನ್ನನ್ನು ಕರೆಸಿಕೊಂಡಿದ್ದು,  ಮನೆಯಲ್ಲಿ ಉಳಿದವರು ಬಲವಂತವಾಗಿ ಮಹಿಳೆಯ ಮಲಗುವ ಕೊಠಡಿಗೆ ಕರೆದೊಯ್ದು ಫೋಟೋ ಹಾಗೂ  ವಿಡಿಯೋ ಚಿತ್ರೀಕರಿಸಿ, 2ಲಕ್ಷ ರೂ. ನೀಡುವಂತೆ ತಂಡ ಒತ್ತಾಯಿಸಿದೆ. ಹಣ ನೀಡದಿದ್ದಲ್ಲಿ ವಿಡಿಯೋ ಹಾಗೂ ಪೋಟೋ ಸಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸುವುದಾಗಿ ಬೆದರಿಕೆಯೊಡ್ಡಿರುವುದಾಗಿ ವ್ಯಾಪಾರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.


  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries