HEALTH TIPS

'ಎಥಿಕ್ಸ್‌ ಸಮಿತಿ'ಗೆ ಭಾರತ ಹಾಕಿ ತಂಡದ ಮಾಜಿ ನಾಯಕಿ ಅಸುಂತಾ ಲಾಕ್ರಾ ಸವಾಲು

ನವದೆಹಲಿ (PTI): ಹಾಕಿ ಇಂಡಿಯಾದ ನೀತಿ-ನಿಯಮಾವಳಿ (ಎಥಿಕ್ಸ್‌) ಸಮಿತಿಯು ತಮ್ಮ ವಿರುದ್ಧ ಕೈಗೊಂಡಿರುವ ವಿಚಾರಣೆಯ ಸಿಂಧುತ್ವನ್ನು ಭಾರತ ಹಾಕಿ ತಂಡದ ಮಾಜಿ ನಾಯಕಿ ಅಸುಂತಾ ಲಾಕ್ರಾ ಪ್ರಶ್ನಿಸಿದ್ದಾರೆ. ಈ ಸಮಿತಿಯ ಕಾರ್ಯವ್ಯಾಪ್ತಿಯನ್ನೂ ಅವರು ಪ್ರಶ್ನಿಸಿದ್ದಾರೆ. 


ಜಾರ್ಖಂಡ್ ಹಾಕಿ ಸಂಸ್ಥೆಯಲ್ಲಿ ಮಹಿಳಾ ಆಟಗಾರ್ತಿಯರಿಗೆ ತರಬೇತುದಾರ ಸುಧೀರ್ ಗೊಲ್ಲಾ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಅಸುಂತಾ ಜೂನ್‌ನಲ್ಲಿ ಆರೋಪಿಸಿದ್ದರು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಹಾಕಿ ಇಂಡಿಯಾ ಕಾರ್ಯದರ್ಶಿ ಭೋಲಾನಾಥ್ ಸಿಂಗ್ ಅವರು ತಮಗೆ ಬೆದರಿಕೆ ಹಾಕಿದ್ದರು ಎಂದು ಅಸುಂತಾ ಅವರು ಹಾಕಿ ಇಂಡಿಯಾ ಮತ್ತು ಕ್ರೀಡಾ ಸಚಿವಾಲಯಕ್ಕೆ ದೂರು ಸಲ್ಲಿಸಿದ್ದರು.

ಲಾಕ್ರಾ ಅವರ ದೂರಿನಲ್ಲಿ ಮಾಡಿರುವ ಆರೋಪಗಳ ಬಗ್ಗೆ ಸ್ವತಂತ್ರವಾಗಿ ತನಿಖೆ ನಡೆಸುವಂತೆ ಕ್ರೀಡಾ ಸಚಿವಾಲಯವು ಭಾರತ ಒಲಿಂಪಿಕ್ ಸಂಸ್ಥೆಗೆ ತಿಳಿಸಿತ್ತು.

ಜಾರ್ಖಂಡ್‌ನವರೇ ಆಗಿರುವ ಭಾರತ ತಂಡದ ಮಾಜಿ ಅಂತರರಾಷ್ಟ್ರೀಯ ಆಟಗಾರ್ತಿ ಅಲಬೇಲಾ ರಾಣಿ ಟೊಪ್ಪೊ ಅವರು ನೀಡಿದ ದೂರಿನ ಆಧಾರದಲ್ಲಿ ಅಸುಂತಾ ಲಾಕ್ರಾ ಅವರಿಗೆ ಹಾಕಿ ಇಂಡಿಯಾದ ನೀತಿ-ನಿಯಮಾವಳಿ (ಎಥಿಕ್ಸ್‌) ಸಮಿತಿಯು ಜುಲೈನಲ್ಲಿ ಷೋಕಾಸ್ ನೋಟಿಸ್ ನೀಡಿ ವಿಚಾರಣೆಗೆ ಎದುರಿಸುವಂತೆ ತಿಳಿಸಿತ್ತು.

ನೀತಿ ನಿಯಮಾವಳಿ ಸಮಿತಿ ಅಧ್ಯಕ್ಷರಾದ ನ್ಯಾಯಮೂರ್ತಿ (ನಿವೃತ್ತ) ರಾಘವೇಂದ್ರ ಕುಮಾರ್ ಅವರಿಗೆ ಅಸುಂತಾ ಒಂಬತ್ತು ಪುಟಗಳ ಪೂರ್ವಭಾವಿ ಉತ್ತರ ಕಳುಹಿಸಿದ್ದಾರೆ. 'ತಮ್ಮ ವಿರುದ್ಧ ಅಲಬೇಲಾ ರಾಣಿ ಟೊಪ್ಪೊ ಅವರು ನೀಡಿರುವ ದೂರುಗಳು, ಸುಳ್ಳು, ಆಧಾರರಹಿತ, ದ್ವೇಷಪೂರಿತ ಮತ್ತುಮಾನಹಾನಿಕರವಾಗಿವೆ' ಎಂದು ಅವರು ಉತ್ತರದಲ್ಲಿ ತಿಳಿಸಿದ್ದಾರೆ.

'ನನ್ನ ವಿರುದ್ಧ ಮಾಡಲಾದ ಪ್ರತಿಯೊಂದು ಆರೋಪವನ್ನೂ ನಾನು ತಳ್ಳಿ ಹಾಕುತ್ತೇನೆ. ಆರೋಪಗಳು ದುರುದ್ದೇಶಪೂರಿತವಾಗಿದ್ದು ಸತ್ಯಾಂಶವನ್ನು ತಿರುಚಲಾಗಿದೆ' ಎಂದು ಉತ್ತರದಲ್ಲಿ ಹೇಳಿದ್ದಾರೆ. ಆಗಸ್ಟ್‌ 5ರ ಒಳಗೆ ನೋಟಿಸ್‌ಗೆ ಉತ್ತರಿಸುವಂತೆ ಅಸುಂತಾ ಅವರಿಗೆ ತಿಳಿಸಲಾಗಿತ್ತು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries