ಲಖನೌ (PTI): ಉತ್ತರ ಪ್ರದೇಶದ ಕಾನ್ಪುರದಲ್ಲಿ ತರಬೇತಿನಿರತ ವಿಮಾನದ ಪತನಕ್ಕೂ ಒಂದು ತಿಂಗಳುಮೊದಲೇ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ)'ಟೆಕ್ನಂ' ವಿಮಾನದ ಸುರಕ್ಷತಾ ಕ್ರಮಗಳ ಕುರಿತು ಕಳವಳ ವ್ಯಕ್ತಪಡಿಸಿತ್ತು.
'ಟೆಕ್ನಂ' ವಿಮಾನಗಳ ಸುರಕ್ಷತೆಗೆ ಸಂಬಂಧಿಸಿದಂತೆ ಫ್ಲೈಯಿಂಗ್ ಟ್ರೈನಿಂಗ್ ಆರ್ಗನೈಜೇಷನ್‌ಗಳಿಗೆ (ಎಫ್‌ಟಿಒ) ಶಿಫಾರಸುಗಳನ್ನು ಮಾಡಿ, ತಕ್ಷಣವೇ ಅನುಷ್ಠಾನಕ್ಕೆ ತರುವಂತೆ ಸೂಚಿಸಿತ್ತು.
ಡಿಜಿಸಿಎ 2025ರಿಂದಿಚೇಗೆ ಕನಿಷ್ಠ ಎರಡು ಬಾರಿ 'ಟೆಕ್ನಂ' ವಿಮಾನಗಳ ಸುರಕ್ಷತೆ ಕುರಿತು ಎಫ್‌ಟಿಒಗಳಿಗೆ ಎಚ್ಚರಿಕೆ ನೀಡಿತ್ತು ಎಂದು ಪಿಟಿಐ ಸುದ್ದಿ ಸಂಸ್ಥೆ ಮಾಹಿತಿ ಕಲೆಹಾಕಿದೆ.

