HEALTH TIPS

ಬಿಜೆಪಿ ವಾರ್ಡು ಸಮಿತಿಯಿಂದ ಓಣಂ ಕಿಟ್ ವಿತರಣೆ

ಬದಿಯಡ್ಕ: ಬಿಜೆಪಿ ಬದಿಯಡ್ಕ ಮಂಡಲದ ಚೆಂಗಳ ಪಂಚಾಯಿತಿ 5ನೇ ವಾರ್ಡ್ (ನಾರಂಪಾಡಿ) ಸಮಿತಿಯ ನೇತೃತ್ವದಲ್ಲಿ 60 ಕುಟುಂಬಗಳಿಗೆ ಓಣಂ ಕಿಟ್‍ಗಳನ್ನು ವಿತರಿಸಲಾಯಿತು. ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ಉದ್ಘಾಟಿಸಿದರು. ಕೇರಳದ ಹಳ್ಳಿಗಳೂ ನಗರೀಕರಣದ ಭಾಗವಾಗಿ ಬದಲಾಗುತ್ತಿದ್ದಂತೆ ಕುಟುಂಬಗಳ ನಡುವಿನ ಬಾಂಧವ್ಯದಲ್ಲಿ ದೂರ ಹೆಚ್ಚಾಗುತ್ತಿದೆ ಎಂದು ಅಶ್ವಿನಿ ಹೇಳಿದರು. ಓಣಂನಂತಹ ಹಬ್ಬಗಳ ಸಂದರ್ಭಗಳು ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗುವ ವೇದಿಕೆಯಾಗಬೇಕು ಎಂದು ಅವರು ಕರೆ ನೀಡಿದರು. 

ಬೂತ್ ಅಧ್ಯಕ್ಷ ಸತ್ಯಗೋಪಾಲ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಆರ್. ಸುನಿಲ್, ರಾಜ್ಯ ಕೌನ್ಸಿಲ್ ಸದಸ್ಯ ಹರೀಶ್ ನಾರಂಪಾಡಿ ಹಾಗೂ ಬದಿಯಡ್ಕ ಮಂಡಲ ಅಧ್ಯಕ್ಷ ಎಂ. ಗೋಪಾಲಕೃಷ್ಣನ್ ಮಾತನಾಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries