HEALTH TIPS

ಇಂದೇ ಲೋಕಸಭಾ ಚುನಾವಣೆ ನಡೆದರೆ ಯಾರಿಗೆ ಅಧಿಕಾರ? ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಬಯಲಾಯಿತು ಅಚ್ಚರಿಯ ಫಲಿತಾಂಶ

 ನವದೆಹಲಿ: ದೇಶದಲ್ಲಿ ಈಗಲೇ ಸಾರ್ವತ್ರಿಕ ಚುನಾವಣೆಗಳು ನಡೆದರೆ ಮತದಾರರ ಒಲವು ಯಾರ ಕಡೆಗಿದೆ? ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯ ಅಲೆ ಇಂದಿಗೂ ಹಾಗೆಯೇ ಇದೆಯೇ ಅಥವಾ ವಿರೋಧ ಪಕ್ಷಗಳು ಪ್ರಬಲ ಪೈಪೋಟಿ ನೀಡುತ್ತಿವೆಯೇ? ಇಂತಹ ನೂರಾರು ರಾಜಕೀಯ ಲೆಕ್ಕಾಚಾರಗಳಿಗೆ ಹೊಸ ಸಮೀಕ್ಷೆಯೊಂದು ಉತ್ತರ ನೀಡಿದೆ! ಇನ್ನು ಆ ಸಮೀಕ್ಷೆಯ ಪ್ರಕಾರ ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಮುನ್ನಡೆ ಕಾಯ್ದುಕೊಂಡಿದ್ದರೂ, ಕಳೆದ ಬಾರಿಯ ಅಂಕಿಅಂಶಗಳಿಗೆ ಹೋಲಿಸಿದರೆ ಅಚ್ಚರಿಯ ಬದಲಾವಣೆಗಳು ದಾಖಲಾಗಿವೆ. ಆ ಕುರಿತ ವರದಿ ಇಲ್ಲಿದೆ:


ಎನ್‌ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ

ಇಂಡಿಯಾ ಟುಡೇ ಮತ್ತು ಸಿವೋಟರ್ ನಡೆಸಿದ ಇತ್ತೀಚಿನ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ಪ್ರಕಾರ, ಇಂದೇ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳಲಿದೆ ಎನ್ನಲಾಗಿದೆ. ಅದರಂತೆ, ಇಂದೇ ಚುನಾವಣೆ ನಡೆದರೆ, ಪ್ರಸ್ತುತ 12ನೇ ವರ್ಷಕ್ಕೆ ಕಾಲಿಟ್ಟಿರುವ ಮೋದಿ ನೇತೃತ್ವದ ಎನ್‌ಡಿಎ ಕೂಟಕ್ಕೆ 326 ಸ್ಥಾನಗಳು ಲಭಿಸುವ ಸಾಧ್ಯತೆಯಿದೆ. ಆದರೆ, ಜನವರಿಯಲ್ಲಿ ಇದೇ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ 352 ಸ್ಥಾನಗಳ ಮುನ್ಸೂಚನೆ ನೀಡಲಾಗಿತ್ತು, ಅದಕ್ಕೆ ಹೋಲಿಸಿದರೆ ಸುಮಾರು 26 ಸ್ಥಾನಗಳ ಕಡಿಮೆಯಾಗಿದೆ.

ಅದರಲ್ಲೂ, ಪ್ರತ್ಯೇಕವಾಗಿ ಬಿಜೆಪಿ ಪಕ್ಷಕ್ಕೆ 261 ಸ್ಥಾನಗಳು ಲಭಿಸಲಿವೆ ಎಂದು ಅಂದಾಜಿಸಲಾಗಿದೆ. ಇದು ಹಿಂದಿನ ಸಮೀಕ್ಷೆಯ 287 ಸ್ಥಾನಗಳಿಗಿಂತ ಕಡಿಮೆಯಾದರೂ, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದ 240 ಸ್ಥಾನಗಳಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಾಗಿದೆ ಮತ್ತೊಂದೆಡೆ, ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟವು 185 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಲಾಗಿದೆ. ಈ ಪೈಕಿ, ಕಾಂಗ್ರೆಸ್ ಪಕ್ಷವೇ ಒಟ್ಟು 106 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಅದರಲ್ಲೂ, ಜನವರಿಯಲ್ಲಿ ಕಾಂಗ್ರೆಸ್‌ಗೆ ಕೇವಲ 80 ಸ್ಥಾನಗಳು ಮಾತ್ರ ಸಿಗಲಿವೆ ಎಂದು ಅಂದಾಜಿಸಲಾಗಿತ್ತು. ಜೊತೆಗೆ, ಇತರ ಪಕ್ಷಗಳು 43 ಸ್ಥಾನಗಳಲ್ಲಿ ಜಯಗಳಿಸುವ ಸಾಧ್ಯತೆಯಿದೆ ಎಂದು ಸಮೀಕ್ಷೆ ತಿಳಿಸಿದೆ.

ಮೋದಿ ನಂ.1, ವಿಜಯ್ ನಂ.3!

ದೇಶದ ಜನಪ್ರಿಯ ನಾಯಕ ಯಾರು? ಪ್ರಧಾನಿ ಹುದ್ದೆಗೆ ಯಾರು ಸೂಕ್ತ? ಎಂಬ ಪ್ರಶ್ನೆಗೆ ಶೇಕಡಾ 50 ಕ್ಕೂ ಹೆಚ್ಚು ಜನರು ಮತ್ತೊಮ್ಮೆ ನರೇಂದ್ರ ಮೋದಿ ಅವರ ಹೆಸರನ್ನೇ ಆಯ್ಕೆ ಮಾಡಿದ್ದಾರೆ. ಅದರಂತೆ, ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶೇ. 48.7 ರಷ್ಟು ಜನರ ಬೆಂಬಲದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶೇ. 27.1 ರಷ್ಟು ಬೆಂಬಲದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಅದರಲ್ಲೂ, ಮುಖ್ಯಮಂತ್ರಿಯಾಗಿ ಕೇವಲ ಮೂರು ತಿಂಗಳು ಪೂರೈಸಿರುವ ವಿಜಯ್ ಅವರು ಶೇ. 9.2 ರಷ್ಟು ಮತದಾರರ ಒಲವು ಗಳಿಸಿ ಅಚ್ಚರಿ ಮೂಡಿಸಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries