HEALTH TIPS

ಪರಕ್ಕಿಲದಲ್ಲಿ ಯುವಬಂಟರ ಸಂಘದಿಂದ ಆಟಿಡೊಂಜಿ ದಿನ ಕಾರ್ಯಕ್ರಮ

ಮಧೂರು: ಯುವ ಬಂಟರ ಸಂಘದ ಮಧೂರು ಪಂಚಾಯಿತಿ ಸಮಿತಿ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಪರಕ್ಕಿಲದಲ್ಲಿ ಜರುಗಿತು. ಕಾರ್ಯಕ್ರಮದ ಅಂಗವಾಗಿ ಬಂಟ ಮಹಿಳೆಯರಿಂದ ಭಜನೆ ನಡೆಯಿತು.  ಬಂಟರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘದ ಸದಸ್ಯ, ವಕೀಲ ಸದಾನಂದ ರೈ  ಸಮಾರಂಭ ಉದ್ಘಾಟಿಸಿದರು. ಮಧೂರು ಯುವ ಬಂಟರ ಸಂಘದ ಅಧ್ಯಕ್ಷರು ಹಾಗೂ ಮಧೂರು ಗ್ರಾಪಂ ಸದಸ್ಯ ನವನೀತ ರೈ ಅಧ್ಯಕ್ಷತೆ ವಹಿಸಿದ್ದರು. 


ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ಕುಚ್ಚಿಕ್ಕಾಡು ಮುಖ್ಯ ಭಾಷಣ ಮಾಡಿದರು. ಮಧೂರು ಬಂಟರ ಸಂಘದ ಅಧ್ಯಕ್ಷ ರಾಮಕೃಷ್ಣ ಆಳ್ವ ಕುತ್ತಾರು ಗುತ್ತು ಸಂಘದ ವತಿಯಿಂದ ನಿರ್ಮಿಸಲಾಗುತ್ತಿರುವ ಬಂಟರ ಭವನದ ಕಾಮಗರಿಯ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ಮಧೂರು ಮಹಿಳಾ ಬಂಟರ ಸಂಘದ ಗೌರವಧ್ಯಕ್ಷೆ, ಖ್ಯಾತ ನಾಟಿ ವೈದ್ಯೆ ಡಾ. ಯಮುನಾ ಎಸ್ ಶೆಟ್ಟಿ, ಅಧ್ಯಕ್ಷೆ ಶ್ಯಾಮಲಾ ಎಂ ಶೆಟ್ಟಿ, ಕಾಸರಗೋಡು ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷೆ ಶ್ಯಾಮಲಾ ಎಂ ಶೆಟ್ಟಿ, ಮಧೂರು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ರೈ ನಾಯಕ್ಕೋಡು,  ಯುವ ಬಂಟರ ಸಂಘದ ಪದಾಧಿಕಾರಿಗಳಾದ  ಸಂತೋಷ್ ರೈ ಗಂಗೆ,  ಅಶೋಕ ರೈ, ಶಿವರಾಜ ರೈ ಕಾಳ್ಯಂಗಾಡು ಮೊದಲಾದವರು ಉಪಸ್ಥಿತರಿದ್ದರು. 

ಖ್ಯಾತ ನಿರೂಪಕ ಶ್ರೇಯಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.  ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳು, ಆಟಿ ಮಾಸದ ವಿಶೇಷ ತಿಂಡಿ ತಿನಸುಗಳ ಪ್ರದರ್ಶನ, ಬಂಟ ಯುವಕರು ಹೊಸಮನೆ ಇವರಿಂದ ಯಕ್ಷ ಗಾನ ಬಯಲಾಟ,  ಕ್ರೀಡಾ ಸ್ಪರ್ಧೆಗಳ ಅಂಗವಾಗಿ ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗ ಜಗ್ಗಾಟ ಸಹಿತ ಹಲವು ಸ್ಪರ್ಧೆಗಳನ್ನು ನಡೆಸಲಾಯಿತು. ಆಟಿಮಾಸದ ತಿನಿಸು ಒಳಗೊಂಡ ಭೋಜನ ಉಣಬಡಿಸಲಾಯಿತು.

ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಸಂಗೀತ, ಹೆಣ್ಮಕ್ಕಳಿಂದ ಹಾಗೂ ಬಾಲಕ ಬಾಲಕಿಯರಿಂದ ಆಕರ್ಷಕ ನೃತ್ಯ ಕಾರ್ಯಕ್ರಮಗಳು ನಡೆಯಿತು ಸಂಜೆ ಜರಗಿದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries