HEALTH TIPS

California | ಬೆಟ್ಟದ ಅಂಚಿನಿಂದ ಪೆಸಿಫಿಕ್ ಮಹಾಸಾಗರಕ್ಕೆ ಬಿದ್ದ ಕಾರು: ಭಾರತೀಯ ಮೂಲದ ವಿದ್ಯಾರ್ಥಿನಿ ಮೃತ್ಯು

ಸ್ಯಾಕ್ರಮೆಂಟೊ: ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಭಾರತೀಯ ಮೂಲದ ವಿದ್ಯಾರ್ಥಿನಿಯೊಬ್ಬರು ಈ ತಿಂಗಳ ಆರಂಭದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 


ಮೃತರನ್ನು ಅಲಿ ರೆನೀ ಸಿಂಗ್ (19) ಎಂದು ಗುರುತಿಸಲಾಗಿದೆ. ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯ, ಸಾಂತಾಕ್ರೂಝ್ ನಲ್ಲಿ ಅಲಿ ರೆನೀ ಸಿಂಗ್ ಅವರ ಮೂರನೇ ವರ್ಷದ ವ್ಯಾಸಂಗ ಕೆಲವೇ ದಿನಗಳಲ್ಲಿ ಆರಂಭವಾಗಲಿತ್ತು.

ಆಗಸ್ಟ್ 13ರಂದು ಅವರ ಸ್ನೇಹಿತ ಚಲಾಯಿಸುತ್ತಿದ್ದ ಕಾರು 'ವೆಸ್ಟ್ ಕ್ಲಿಫ್ ಡ್ರೈವ್'ನಿಂದ ಪೆಸಿಫಿಕ್ ಸಾಗರಕ್ಕೆ ಉರುಳಿ ಬಿದ್ದಿದೆ.

''ಬಹಳ ದುಃಖ ಮತ್ತು ಭಾರವಾದ ಹೃದಯದಿಂದ ನಾನು ಈ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ರವನೀತ್ ಮಹಲ್ ಮತ್ತು ಜಿಯಾನ್ ಸಿಂಗ್ ಅವರ ಪುತ್ರಿ, ನನ್ನ ಸೋದರಸೊಸೆ ಅಲಿ ರೆನೀ ಸಿಂಗ್ ಆಗಸ್ಟ್ 13ರ ಮುಂಜಾನೆ ಸಂಭವಿಸಿದ ಕಾರು ಅಪಘಾತದಲ್ಲಿ ನಮ್ಮನ್ನಗಲಿದ್ದಾಳೆ'' ಎಂದು ಸಿಂಗ್ ಅವರ ಚಿಕ್ಕಮ್ಮ ಮೋನಿಕಾ ಸಿಂಗ್-ಸ್ಟ್ರೋಹ್ಮಯರ್ ಫೇಸ್ಬುಕ್ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ನೀರಿನಲ್ಲಿ ಮುಳುಗಿದ್ದ ವಾಹನದೊಳಗೆ ಸಿಲುಕಿಕೊಂಡಿದ್ದ ಸಿಂಗ್ ಅವರನ್ನು ಈಜುಗಾರರು ಮೇಲಕ್ಕೆತ್ತಿದರು. ಈ ನಡುವೆ, ಸಿಂಗ್ ಅವರ ಜೊತೆಯಲ್ಲಿದ್ದ ಸ್ನೇಹಿತ ಹಾಗೂ ಕಾರು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries