HEALTH TIPS

ಬೋಸ್ಟನ್ ಶಿಕ್ಷಣದ ವಿವಾದ | 'ನನ್ನ ಪದವಿ ತೋರಿಸುತ್ತೇನೆ; ಮೋದಿ ಅವರೂ ಪದವಿ ತೋರಿಸಲಿ': CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಸವಾಲು

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆಯೇ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮ ಮತ್ತು ಪಾಡ್‌ಕಾಸ್ಟ್‌ಗಳಲ್ಲಿ ಚರ್ಚೆ ನಡೆಯುತ್ತಿದೆ. ಈ ಕುರಿತು ಸೋಮವಾರ ಪ್ರತಿಕ್ರಿಯಿಸಿರುವ ಅವರು, ತಮ್ಮ ಪದವಿ ಹಾಗೂ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಲು ಸಿದ್ಧ ಎಂದು ಹೇಳಿದ್ದಾರೆ. 


'ನಾನು ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದೇನೆ ಎಂಬುದನ್ನು ಸಾಬೀತುಪಡಿಸಲು ನನ್ನ ದಾಖಲೆಗಳನ್ನು ತೋರಿಸುತ್ತೇನೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರೂ ತಮ್ಮ ಪದವಿ ಪತ್ರವನ್ನು ತೋರಿಸಲು ಸಿದ್ಧರಿದ್ದಾರೆಯೇ?' ಎಂದು ಅವರು ಪ್ರಶ್ನಿಸಿದ್ದಾರೆ.

ಎಕ್ಸ್‌ನಲ್ಲಿ ಪ್ರಕಟಿಸಿರುವ ವಿಡಿಯೊದಲ್ಲಿ ದೀಪ್ಕೆ, 'ಕಳೆದ ಕೆಲವು ದಿನಗಳಿಂದ ಜನರು ನನ್ನನ್ನು ವಂಚಕ ಎಂದು ಕರೆಯುತ್ತಿದ್ದಾರೆ. ನಾನು ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿಯೇ ಇಲ್ಲ ಎಂದು ಆರೋಪಿಸುತ್ತಿದ್ದಾರೆ. ನನ್ನ ಪದವಿಯನ್ನು ತೋರಿಸಲು ನಾನು ಸಿದ್ಧನಿದ್ದೇನೆ. ಆದರೆ, ನಿಮ್ಮ ಪಾಪಾ ತಮ್ಮ ಪದವಿ ತೋರಿಸುತ್ತಾರೆಯೇ?' ಎಂದು ಹೇಳಿದ್ದಾರೆ.

'ನಾಳೆ ನಾನು ನನ್ನ ಪದವಿಯನ್ನು ತೋರಿಸುತ್ತೇನೆ. ನಿಮ್ಮ ಪಾಪಾಗೆ ಅವರ ಪದವಿಯನ್ನು ತೋರಿಸಲು ಹೇಳಿ. ನೀವು ಸಿದ್ಧರಿದ್ದೀರಾ? ನಿಮ್ಮ ಪಾಪಾಗೆ ಅವರ ಪದವಿ ಪತ್ರ ತೋರಿಸುವಂತೆ ಮನವಿ ಮಾಡಿ. ನನ್ನ ಬಳಿ ಎಲ್ಲ ದಾಖಲೆಗಳೂ ಇವೆ' ಎಂದು ಅವರು ಹೇಳಿದ್ದಾರೆ.

ಎರಡು ವಿಡಿಯೊ ಹಂಚಿಕೆ

ದೀಪ್ಕೆ ಅವರು ಮತ್ತೊಂದು ಪ್ರತ್ಯೇಕ ಪೋಸ್ಟ್‌ನಲ್ಲಿ ಎರಡು ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ಒಂದು ವಿಡಿಯೊದಲ್ಲಿ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಅವರ ಕೊನೆಯ ದಿನದ ದೃಶ್ಯಗಳಿವೆ. ಮತ್ತೊಂದು ವಿಡಿಯೊದಲ್ಲಿ ತರಗತಿಯ ವೇಳೆ ಅವರ ಪ್ರಾಧ್ಯಾಪಕರೊಬ್ಬರು ಕಾಣಿಸಿಕೊಂಡಿದ್ದಾರೆ.

'ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ನಾನು ಅನುಭವಿಸಿದ ವಿನೋದವನ್ನು ಈ ಪರಾಜಿತರಿಗೆ ಹೇಗೆ ವಿವರಿಸಲಿ? ಪಾಪಾರ ಐಟಿ ಸೆಲ್‌ಗಿಂತ ನನ್ನ 80 ವರ್ಷದ ಪ್ರಾಧ್ಯಾಪಕರು ಹೆಚ್ಚು ಸಂಯಮಿಗಳಾಗಿದ್ದರು' ಎಂದು ಅವರು ವ್ಯಂಗ್ಯವಾಡಿದ್ದಾರೆ.


Deal?







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries