HEALTH TIPS

'ನಾವು Gen Z ಅನ್ನೋದು ನನ್ನಪ್ಪ ಯಾರು ಗೊತ್ತಾ ಅನ್ನೋದರ ಹೊಸ ರೂಪ': ಯೋಧರ ಜೊತೆ ಯುವತಿಯ ವಾಗ್ವಾದಕ್ಕೆ ಸಿಎಂ ಒಮರ್‌ ಅಬ್ದುಲ್ಲಾ ತೀಕ್ಷ್ಮ ಪ್ರತಿಕ್ರಿಯೆ; Video

ನವದೆಹಲಿಜಮ್ಮು- ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು “ನಾವು ಜೆನ್‌ ಜಿ” ಎಂಬ ಮಾತಿನ ಹೆಚ್ಚುತ್ತಿರುವ ಬಳಕೆಯನ್ನು ವ್ಯಂಗ್ಯವಾಡಿದ್ದು, ಅದನ್ನು ಹಳೆಯ ಕಾಲದ “ನನ್ನಪ್ಪ ಯಾರು ಗೊತ್ತಾ?” ಎಂಬ ಬೆದರಿಕೆಯ ಮಾತಿಗೆ ಹೋಲಿಸಿದ್ದಾರೆ. 


ಸಣ್ಣದೊಂದು ಅಸಮಾಧಾನ ಎದುರಾದರೂ ಈ ಮಾತನ್ನು ಬೆದರಿಕೆಯಾಗಿ ಬಳಸುವುದು ಜೆನ್‌ ಜಿ ಅಂದರೆ ದೇಶದ ಯುವಸಮೂಹ ಬಗ್ಗೆ ಇರುವ ಸದಭಿಪ್ರಾಯವನ್ನು ಹಾಳುಮಾಡುವ ಅತ್ಯಂತ ವೇಗದ ಮಾರ್ಗವಾಗಿದೆ ಎಂದು ಎಚ್ಚರಿಸಿದ್ದಾರೆ.

ನಾವು ಜೆನ್‌ ಜಿ’ ಎಂಬ ಮಾತು ಈಗ ‘ನನ್ನಪ್ಪ ಯಾರು ಗೊತ್ತಾ?’ ಎಂಬ ಮಾತಿನ ಹೊಸ ರೂಪವಾಗಿದೆ. ಸಣ್ಣದೊಂದು ಅವಮಾನ ಅಥವಾ ಅಸಮಾಧಾನ ಎದುರಾದ ಕೂಡಲೇ ಜೆನ್‌ ಜಿ ಎಂಬ ಗುರುತನ್ನು ಬೆದರಿಕೆಯಾಗಿ ಬಳಸಲು ಆರಂಭಿಸಿದರೆ, ಜೆನ್‌ ಝಡ್‌ ಬಗ್ಗೆ ಇರುವ ಸದಭಿಪ್ರಾಯವನ್ನು ಹಾಳುಮಾಡುವ ಅತ್ಯಂತ ವೇಗದ ಮಾರ್ಗವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊವೊಂದಕ್ಕೆ ಒಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ. ಲಡಾಖ್‌ನ ಕಾರ್ಗಿಲ್‌ನ ಮಿನಿಮಾರ್ಗ್ ಚೆಕ್‌ಪೋಸ್ಟ್‌ನಲ್ಲಿ ಯುವತಿಯೊಬ್ಬರು ಗದ್ದಲ ಎಬ್ಬಿಸಿ, ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಬ್ಯಾರಿಕೇಡ್ ಹಾಕಲಾಗಿದ್ದ ಪ್ರದೇಶವನ್ನು ದಾಟಲು ಕಾಯುತ್ತಿದ್ದ ಹಲವು ಪ್ರವಾಸಿಗರಲ್ಲಿ ಈ ಯುವತಿಯೂ ಇದ್ದರು ಎನ್ನಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries