HEALTH TIPS

Gen Z ದೇಶ ವಿರೋಧಿಗಳಲ್ಲ ಎಂದಾದರೆ ಬಿಜೆಪಿ ದಾಳಿ ಮಾಡಿದ್ದೇಕೆ: ವಿಪಕ್ಷಗಳ ಪ್ರಶ್ನೆ

ಮುಂಬೈ: ಜೆನ್ ಝೀಗಳನ್ನು ದೇಶ ವಿರೋಧಿಗಳು ಎನ್ನಬೇಡಿ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಅವರು ದೇಶ ವಿರೋಧಿಗಳಲ್ಲ ಎಂದಾದರೆ ಪ್ರತಿಭಟನೆ ನಡೆಸಿದ ಯುವಕರ ಮೇಲೆ ಬಿಜೆಪಿ ನಾಯಕರು ದಾಳಿ ಮಾಡಿದ್ದೇಕೆ ಎಂದು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಎನ್‌ಸಿಪಿ (ಎಸ್‌ಪಿ) ಶುಕ್ರವಾರ ಪ್ರಶ್ನಿಸಿವೆ. 


ಆಡಳಿತ ಪಕ್ಷ ಮತ್ತು ಅದರ ಸೈದ್ಧಾಂತಿಕ ಮೂಲವಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ.

ಗುರುವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೋಹನ್ ಭಾಗವತ್, ಜೆನ್ ಝೀಗಳು ಪ್ರತಿಭಟನೆ ನಡೆಸಿದಾಕ್ಷಣ ಅವರು ದೇಶ ವಿರೋಧಿಗಳಲ್ಲ, ಅವರು ನಮ್ಮ ಜನರು. ಅವರೊಂದಿಗೆ ಚರ್ಚೆ ಮತ್ತು ಸಂವಾದ ನಡೆಸುವುದು ಅಗತ್ಯ ಎಂದಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಎನ್‌ಸಿಪಿ (ಎಸ್‌ಪಿ) ವಕ್ತಾರ ಮಹೇಶ್ ತಾಪಸೆ, 'ದೇಶವು ಸಂಘ ಪರಿವಾರದ ಎರಡು ವಿಭಿನ್ನ ಮುಖಗಳನ್ನು ಕಾಣುತ್ತಿದೆ ಎಂದಿದ್ದಾರೆ. ಒಂದೆಡೆ ಭಾಗವತ್ ಅವರು ಯುವಕರ ಪರವಾಗಿ ಮಾತನಾಡುತ್ತಿದ್ದರೆ, ಇನ್ನೊಂದೆಡೆ ಸಂಸದರಾದ ನಿಶಿಕಾಂತ್ ದುಬೆ ಮತ್ತು ಕಂಗನಾ ರನೌತ್‌ ಸೇರಿದಂತೆ ಬಿಜೆಪಿಯ ಹಲವು ನಾಯಕರು ನೀಟ್ ಪರೀಕ್ಷಾ ಅಕ್ರಮ ಖಂಡಿಸಿ ಪ್ರತಿಭಟನೆ ನಡೆಸಿದ ಯುವಕರ ಮೇಲೆ ಗಂಭೀರ ಆರೋಪ ಮಾಡಿದ್ದರು. ಈ ದ್ವಂದ್ವ ನೀತಿಯಿಂದ ಭಾರತದ ಯುವಜನತೆಯನ್ನು ಹಾದಿತಪ್ಪಿಸಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

ಎನ್‌ಸಿಪಿ (ಎಸ್‌ಪಿ) ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೊ ಮಾತನಾಡಿ, 'ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆದಾಗ ಈ ಬಿಜೆಪಿ ನಾಯಕರು ಎಲ್ಲಿದ್ದರು?. ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಜೆನ್ ಝೀಗಳ ಮೇಲೆ ಲಾಠಿಚಾರ್ಜ್ ಮಾಡಲು ಆದೇಶಿಸಿದ್ದು ಯಾರು ಎಂಬುದಕ್ಕೆ ಬಿಜೆಪಿ ನೇತೃತ್ವದ ಸರ್ಕಾರ ಉತ್ತರ ನೀಡಬೇಕು' ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಮಾತನಾಡಿ, 'ಶಿಕ್ಷಣ ಕ್ಷೇತ್ರಕ್ಕೆ ಜಿಡಿಪಿಯ ಶೇ 6ರಷ್ಟು ಹಣವನ್ನು ವೆಚ್ಚ ಮಾಡಬೇಕೆಂದು ಭಾಗವತ್ ಹೇಳಿರುವುದನ್ನು ಉಲ್ಲೇಖಿಸಿ, ಆರ್‌ಎಸ್‌ಎಸ್ ಶಿಫಾರಸಿನ ಮೇರೆಗೆ ವಿಶ್ವವಿದ್ಯಾಲಯಗಳಿಗೆ ನೇಮಕಗೊಂಡಿರುವ ಅಸಮರ್ಥ ಉಪಕುಲಪತಿಗಳು ಹಾಗೂ ಅಧಿಕಾರಿಗಳನ್ನು ತಕ್ಷಣವೇ ವಜಾಗೊಳಿಸಬೇಕು. ಶಿಕ್ಷಣ ಕ್ಷೇತ್ರವನ್ನು ಹಾಳುಮಾಡಲು ಆ ಸಂಘಟನೆಯೇ ಪ್ರಮುಖ ಕಾರಣ' ಎಂದು ಆರೋಪಿಸಿದ್ದಾರೆ.

ಮಹಾರಾಷ್ಟ್ರ ನವನಿರ್ಮಾಣ ಸೇನಾ ಅಧ್ಯಕ್ಷ ರಾಜ್ ಠಾಕ್ರೆ ಮಾತನಾಡಿ, 'ದೆಹಲಿಯಲ್ಲಿ ಯುವ ಪ್ರತಿಭಟನಾಕಾರರ ಮೇಲೆ ನಡೆದ ಪೊಲೀಸ್ ಕ್ರಮವು ಬಿಜೆಪಿಯೊಳಗಿನ ಆಂತರಿಕ ಕಲಹದ ಫಲಿತಾಂಶ. ಪ್ರಧಾನಿ ಹುದ್ದೆಗಾಗಿ ಬಿಜೆಪಿಯಲ್ಲಿ ಹಗ್ಗಜಗ್ಗಾಟ ನಡೆಯುತ್ತಿದೆ' ಎಂದು ಆಪಾದಿಸಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries