HEALTH TIPS

ಅ.1ರಿಂದ LPGಗೆ EKYC ಕಡ್ಡಾಯ; ತಪ್ಪಿದರೆ 5, 10KG LPG ಮಾತ್ರ ಲಭ್ಯ

ನವದೆಹಲಿ: ಅಕ್ಟೋಬರ್ 1ರಿಂದ ಸಬ್ಸಿಡಿ ದರದಲ್ಲಿ ಗೃಹಬಳಕೆಯ ಎಲ್‌ಪಿಜಿ ಮರುಪೂರಣ (ರೀಫಿಲ್) ಪಡೆಯಬೇಕಾದರೆ ಕುಟುಂಬಗಳು ಬಯೋಮೆಟ್ರಿಕ್ ಆಧಾರ್ ದೃಢೀಕರಣ (ಬಿಎಎ) ಅಥವಾ ಇಕೆವೈಸಿಯನ್ನು ಕಡ್ಡಾಯವಾಗಿ ಸಲ್ಲಿಸಿರಬೇಕಾಗುತ್ತದೆ. ಬಿಎಎ ಅಥವಾ ಇಕೆವೈಸಿಯನ್ನು ಸಲ್ಲಿಸಲು ಇಚ್ಛಿಸದವರು ಅಥವಾ ಸಾಧ್ಯವಾಗದವರಿಗೆ ಎಲ್‌ಪಿಜಿ ಪೂರೈಕೆ ಮುಂದುವರಿಯುವುದಾದರೂ, ಅವರಿಗೆ ಅದು ಸಬ್ಸಿಡಿರಹಿತವಾಗಿ ಮಾರುಕಟ್ಟೆ ಬೆಲೆಯಲ್ಲಿ ಲಭ್ಯವಾಗಲಿದೆ.


ಅಲ್ಲದೆ, ಈ ಗ್ರಾಹಕರಿಗೆ 14.2 ಕೆ.ಜಿ. ರೀಫಿಲ್ ಸಿಲಿಂಡರ್ ದೊರೆಯುವುದಿಲ್ಲ. ಅದರ ಬದಲು ಅವರು 5 ಅಥವಾ 10 ಕೆ.ಜಿ.ಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ತೈಲ ಮಾರುಕಟ್ಟೆ ಕಂಪೆನಿಗಳ ಲಭ್ಯತೆಗೆ ಅನುಗುಣವಾಗಿ ಪಡೆಯಲಿದ್ದಾರೆ ಎಂದು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯ ಶನಿವಾರ ತಿಳಿಸಿದೆ.

14.2 ಕೆ.ಜಿ. ಸಿಲಿಂಡರ್‌ಗಳಂತಲ್ಲದೆ, 5 ಅಥವಾ 10 ಕೆ.ಜಿ. ಸಿಲಿಂಡರ್‌ಗಳು ಮುಕ್ತ ವ್ಯಾಪಾರದ ಉತ್ಪನ್ನಗಳಾಗಿದ್ದು, ಅವುಗಳ ದರ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಸರಿಸಮಾನವಾಗಿವೆ.

ಉದಾಹರಣೆಗೆ, ಹೈದರಾಬಾದ್‌ನಲ್ಲಿ 14.2 ಕೆ.ಜಿ. ಇಂಡೇನ್ ರೀಫಿಲ್ ಸಿಲಿಂಡರ್‌ನ ದರ 994 ರೂ. ಇದ್ದರೆ, 19 ಕೆ.ಜಿ. ವಾಣಿಜ್ಯ ಸಿಲಿಂಡರ್ ದರವು ಸುಮಾರು 3 ಸಾವಿರ ರೂ. ಆಗಿದೆ. ಗೃಹೇತರ ಬಳಕೆಯ 5 ಕೆ.ಜಿ. ಎಲ್‌ಪಿಜಿ ಸಿಲಿಂಡರ್‌ನ ಬೆಲೆ 830 ರೂ. ಹಾಗೂ 10 ಕೆ.ಜಿ. ಎಲ್‌ಪಿಜಿ ಸಿಲಿಂಡರ್ ದರ 1,765 ರೂ. ಆಗಿದೆ.

ಬಿಎಎ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವ ಗ್ರಾಹಕರಿಗೆ ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆ ಮುಂದುವರಿಯಲಿದೆ. ಉಳಿದವರು ಬಿಎಎ ದೃಢೀಕರಣ ಸಲ್ಲಿಸಿದ ನಂತರವಷ್ಟೇ ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪಡೆಯಲಿದ್ದಾರೆ ಎಂದು ಸಚಿವಾಲಯ ಘೋಷಿಸಿದೆ.

ಸೆಪ್ಟೆಂಬರ್ 19ರವರೆಗೆ ದೇಶಾದ್ಯಂತ ಸುಮಾರು 27.43 ಕೋಟಿ ಮಂದಿ ಅಥವಾ ಒಟ್ಟು ಗೃಹಬಳಕೆಯ ಎಲ್‌ಪಿಜಿ ಗ್ರಾಹಕರ ಪೈಕಿ ಶೇ.89.9ರಷ್ಟು ಮಂದಿ ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಸಲ್ಲಿಸಿದ್ದಾರೆ. ಕೇವಲ ನೈಜ ಹಾಗೂ ಅರ್ಹ ಕುಟುಂಬಗಳಿಗೆ ಮಾತ್ರವೇ ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪೂರೈಕೆ ಮಾಡುವುದನ್ನು ಬಿಎಎ ಖಾತರಿಪಡಿಸುತ್ತದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries