HEALTH TIPS

ಹಣತೆ ಹಚ್ಚಲು ಹಣವಿದೆ, ಆದರೆ ಹಾಸ್ಟೆಲ್‌ಗಳಿಗೆ ಇಲ್ಲ: ಪ್ರಧಾನಿ ಜನ್ಮ ದಿನಾಚರಣೆ ಕುರಿತು ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ:  ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಕೊರತೆಯ ಸಮಸ್ಯೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರವಿವಾರ ಧ್ವನಿ ಎತ್ತಿದ್ದಾರೆ. ಅವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಉತ್ತರ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.


ತಮ್ಮ ಮಾತನ್ನು ಪುಷ್ಠೀಕರಿಸಲು ಅವರು ಶನಿವಾರ ಇಂದೋರ್‌ ನಲ್ಲಿ ನಡೆದ 'ಛಾತ್ರೋನ್ ಕಿ ಗೂಂಜ್' ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯೊಬ್ಬರೊಂದಿಗೆ ನಡೆದ ಮಾತುಕತೆಯನ್ನು ಉಲ್ಲೇಖಿಸಿದ್ದಾರೆ.

ಹಾಸ್ಟೆಲ್ ಸಮಸ್ಯೆಯನ್ನು ಶಿಕ್ಷಣಕ್ಕೆ ಸಂಬಂಧಿಸಿದ ಆತಂಕಗಳೊಂದಿಗೆ ಜೋಡಿಸಿ ಮಾತನಾಡಿದ ರಾಹುಲ್ ಗಾಂಧಿ, ಅನೇಕ ಹೆಣ್ಣುಮಕ್ಕಳು ಹಣಕಾಸಿನ ತೊಂದರೆ ಮತ್ತು ಅಭದ್ರತೆಯ ನಡುವೆ ಓದುವ ಒತ್ತಾಯಕ್ಕೆ ಒಳಗಾಗಿದ್ದಾರೆ ಎಂದರು. ಅಲ್ಲದೆ, ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳುವುದನ್ನು ಇಷ್ಟಪಡದ ವ್ಯವಸ್ಥೆಯ ವಿರುದ್ಧದ ತಮ್ಮ ಟೀಕೆಯನ್ನು ಪುನರುಚ್ಚರಿಸಿದರು.

ಇಂದೋರ್‌ನಲ್ಲಿ ನಡೆದ ಘಟನೆಯನ್ನು ಸ್ಮರಿಸಿದ ರಾಹುಲ್ ಗಾಂಧಿ, ''ದೀಪ ಹಚ್ಚಲು ಸರಕಾರದ ಬಳಿ ಹಣವಿದೆ. ಆದರೆ, ಹಾಸ್ಟೆಲ್‌ಗಳಿಗೆ ಹಣ ಏಕಿಲ್ಲ? ಈ ಪ್ರಶ್ನೆಯನ್ನು ನಿನ್ನೆ ಇಂದೋರ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳು ನನ್ನಲ್ಲಿ ಕೇಳಿದ್ದಳು. ಆಕೆ ಓದಲು ಹಳ್ಳಿಯಿಂದ ನಗರಕ್ಕೆ ಬಂದಿದ್ದಾಳೆ. ಅಲ್ಲಿ ಯಾವುದೇ ಹಾಸ್ಟೆಲ್ ಇಲ್ಲ. ಇದರಿಂದ ಆಕೆ ಪಿಜಿಯಲ್ಲಿ ವಾಸಿಸಬೇಕಾಗಿದೆ. ಕೇವಲ ಸುರಕ್ಷತೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಮಾಸಿಕ ಬಾಡಿಗೆಯ ಚಿಂತೆ ಮತ್ತು ನಿರಾಶ್ರಿತರಾಗುವ ಭಯ-ಇದರ ನಡುವೆ ಆಕೆ ಓದಬೇಕಾಗಿದೆ'' ಎಂದು ಅವರು ಹೇಳಿದರು.

ಅನೇಕ ಹೆಣ್ಣುಮಕ್ಕಳು ನೆಲೆಸಲು ಸೂಕ್ತ ಸ್ಥಳವಿಲ್ಲದ ಕಾರಣದಿಂದ ತಮ್ಮ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸುತ್ತಿದ್ದಾರೆ ಎಂದು ಅವರು ಹೇಳಿದರು. ರಾಹುಲ್ ಗಾಂಧಿ, ವಸತಿ ಭತ್ಯೆಯನ್ನು ಕೂಡ ಪ್ರಶ್ನಿಸಿದ್ದು, ಅದು ಹಣದುಬ್ಬರಕ್ಕೆ ಅನುಗುಣವಾಗಿ ಏರಿಕೆಯಾಗುತ್ತಿಲ್ಲ ಮತ್ತು ಅದು ಭ್ರಷ್ಟಾಚಾರಕ್ಕೆ ತುತ್ತಾಗಿದೆ ಎಂದರು.

''ವಸತಿ ಭತ್ಯೆಯ ಕಥೆಯೇನು? ಅದು ಹಣದುಬ್ಬರಕ್ಕೆ ಅನುಗುಣವಾಗಿ ಹೆಚ್ಚಾಗುವುದಿಲ್ಲ. ಅಲ್ಲದೆ, ಅದು ಭ್ರಷ್ಟಾಚಾರಕ್ಕೆ ಬಲಿಯಾಗುತ್ತಿದೆ. ನರೇಂದ್ರ ಮೋದಿ ಜಿ, ಆ ಪುಟ್ಟ ಹುಡುಗಿಯ ಪ್ರಶ್ನೆಗೆ ನಿಮ್ಮ ಬಳಿ ಉತ್ತರವಿದೆಯೇ?'' ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries