HEALTH TIPS

1,000KM ವ್ಯಾಪ್ತಿ, 50 KG ಪೇಲೋಡ್ ಸಾಮರ್ಥ್ಯದ ಸ್ವದೇಶಿ ಡ್ರೋನ್ ಪರೀಕ್ಷೆ ಯಶಸ್ವಿ

ನವದೆಹಲಿ: ದೇಶದ ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ, ನೋಯ್ಡಾ ಮೂಲದ 'ಐಜಿ ಡಿಫೆನ್ಸ್' ಸಂಸ್ಥೆಯು ದೇಶೀಯವಾಗಿ ಅಭಿವೃದ್ಧಿಪಡಿಸಿದ 'ಕೆಎಎಲ್‌' ಎಂಬ ದೀರ್ಘ ಶ್ರೇಣಿಯ ಡ್ರೋನ್ ಪರೀಕ್ಷೆ ರಾಜಸ್ಥಾನದ ಪೋಖ್ರಾನ್‌ನಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ.


ಬರೋಬ್ಬರಿ 1 ಸಾವಿರ ಕಿಲೋಮೀಟರ್ ದೂರದವರೆಗೆ ಹಾರಿ ಶತ್ರುಗಳ ನೆಲೆಗಳ ಮೇಲೆ ನಿಖರ ದಾಳಿ ನಡೆಸಬಲ್ಲ ಈ ಡ್ರೋನ್, ಭಾರತೀಯ ಸಶಸ್ತ್ರ ಪಡೆಗಳ ಮಾನವರಹಿತ ಯುದ್ಧ ಸಾಮರ್ಥ್ಯಕ್ಕೆ ಭಾರಿ ಬಲ ತಂದಿದೆ. 

ಕೆಎಎಲ್‌' ಡ್ರೋನ್ 1,000 ಕಿಲೋಮೀಟರ್‌ಗಳವರೆಗಿನ ನಿಗದಿತ ವ್ಯಾಪ್ತಿ, 7ರಿಂದ 8 ಗಂಟೆಗಳ ಕಾಲ ಹಾರಾಡುವ ಸಾಮರ್ಥ್ಯ, 50 ಕೆ.ಜಿ ತೂಕದ ಸ್ಫೋಟಕಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಹಾಗೆಯೇ, ಈ ಡ್ರೋನ್‌ ಅನ್ನು ಸಮುದ್ರ ಮಟ್ಟದಿಂದ 5,000 ಮೀಟರ್‌ಗಳಷ್ಟು ಎತ್ತರದಲ್ಲಿ ಕಾರ್ಯಾಚರಣೆ ನಡೆಸುವ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಈ ಡ್ರೋನ್, ಶತ್ರುಗಳ ಪ್ರಮುಖ ಮೂಲಸೌಕರ್ಯಗಳು, ರಾಡಾರ್ ಕೇಂದ್ರ, ಕಮಾಂಡ್ ಸೆಂಟರ್‌ ಮತ್ತು ವಾಯು ರಕ್ಷಣಾ ವ್ಯವಸ್ಥೆ ಮೇಲೆ ಅತ್ಯಂತ ನಿಖರವಾಗಿ ಅಪ್ಪಳಿಸಿ ಧ್ವಂಸಗೊಳಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಷ್ಯಾ-ಉಕ್ರೇನ್ ಯುದ್ಧದಲ್ಲಿ ಇರಾನ್ ಮೂಲದ 'ಶಹೀದ್-136' ಮತ್ತು ರಷ್ಯಾದ 'ಗೆರಾನ್-2' ಡ್ರೋನ್‌ಗಳನ್ನು ಬಳಸಲಾಗಿದೆ. ಕಡಿಮೆ ವೆಚ್ಚದ ಮಾನವರಹಿತ ದಾಳಿ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಇದು ದೀರ್ಘ-ಶ್ರೇಣಿಯ ಮಾನವರಹಿತ ದಾಳಿ ಸಾಮರ್ಥ್ಯ ಮತ್ತು ಭೌಗೋಳಿಕ ರಾಜಕೀಯ ಮಹತ್ವವನ್ನು ಒತ್ತಿಹೇಳುತ್ತದೆ.

'ಪೋಖ್ರಾನ್‌ನಲ್ಲಿ 'ಕೆಎಎಲ್‌' ಡ್ರೋನ್ ಪರೀಕ್ಷೆ ಯಶಸ್ವಿಯಾಗಿದೆ. ಇದು 'ಐಜಿ ಡಿಫೆನ್ಸ್‌' ಸಂಸ್ಥೆಗೆ ಮತ್ತು ಸುಧಾರಿತ ರಕ್ಷಣಾ ತಂತ್ರಜ್ಞಾನದಲ್ಲಿ ಭಾರತದ ಸ್ವದೇಶಿ ಪ್ರಯಾಣಕ್ಕೆ ಒಂದು ಗಮನಾರ್ಹ ಮೈಲಿಗಲ್ಲಾಗಿದೆ. ಇತ್ತೀಚಿನ ಯುದ್ಧಗಳು ದೀರ್ಘ ಶ್ರೇಣಿಯ ಒನ್-ವೇ ಅಟ್ಯಾಕ್ ಡ್ರೋನ್‌ಗಳು ಕೇವಲ ಸಣ್ಣ ಪ್ರಮಾಣದ ಸಾಮರ್ಥ್ಯವಾಗಿ ಉಳಿದಿಲ್ಲ ಎಂಬುದನ್ನು ತೋರಿಸಿಕೊಟ್ಟಿವೆ. 'ಕೆಎಎಲ್‌' ಡ್ರೋನ್‌ಗಳು ಆಧುನಿಕ ಯುದ್ಧತಂತ್ರದ ಭಾಗವಾಗಿದ್ದು, ನಿಖರ ದಾಳಿ, ವಾಯು ರಕ್ಷಣೆ ಮತ್ತು ಕಾರ್ಯತಂತ್ರದ ಬಗ್ಗೆ ಹಲವು ದೇಶಗಳು ಯೋಚಿಸುವ ರೀತಿಯನ್ನೇ ಪ್ರಭಾವಿಸುತ್ತಿವೆ' ಎಂದು ಐಜಿ ಡಿಫೆನ್ಸ್‌ನ ಸಂಸ್ಥಾಪಕ ಸಂಘಪ್ರಿಯ ಹೇಳಿದ್ದಾರೆ.

ಹೊಸ ಅಗತ್ಯಕ್ಕೆ ಅನುಗುಣವಾಗಿ 'ಕೆಎಎಲ್‌' ಡ್ರೋನ್ ವಿನ್ಯಾಸಗೊಳಿಸಲಾಗಿದ್ದು, ಸುದೀರ್ಘ ವ್ಯಾಪ್ತಿ, ಸ್ವಯಂಚಾಲಿತ ಕಾರ್ಯಾಚರಣೆ, ಶಸ್ತ್ರಾಸ್ತ್ರ ಒಯ್ಯುವ ಸಾಮರ್ಥ್ಯ ಮತ್ತು ಪ್ರಮಾಣೀಕರಿಸಬಹುದಾದ ದೇಶೀಯ ಉತ್ಪಾದನೆಯ ಮೇಲೆ ಗಮನ ಹರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಡ್ರೋನ್‌ನಲ್ಲಿ ಮಲ್ಟಿ-ಬ್ಯಾಂಡ್ GNSS ಮತ್ತು ಇನರ್ಷಿಯಲ್ ನ್ಯಾವಿಗೇಷನ್ ಸಿಸ್ಟಮ್‌ನ್ನು ಸಂಯೋಜಿಸಿರುವ ನ್ಯಾವಿಗೇಷನ್ ವ್ಯವಸ್ಥೆ ಬಳಸಲಾಗಿದೆ. ಅಲ್ಲದೇ ಮಿಷನ್‌ನ ವಿವಿಧ ಹಂತಗಳಲ್ಲಿ ಡ್ರೋನ್ ಸ್ವಾಯತ್ತವಾಗಿ ಹಾರಾಟ ನಡೆಸುವಂತೆ ವಿನ್ಯಾಸಗೊಳಿಸಲಾಗಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries