ನವದೆಹಲಿ: ಯುಪಿಐ ಮೂಲಕ ನಡೆಯುವ ಪಾವತಿಗಳ ಮೇಲೆ ವರ್ತಕರಿಗೆ ವಿಧಿಸುವ ಶುಲ್ಕ (ಎಂಡಿಆರ್) ಕ್ಕೆ ಶೇ.18 ರಷ್ಟು ಜಿಎಸ್‌ಟಿ ವಿಧಿಸುವ ಬಗ್ಗೆ ಮುಂದಿನ ತಿಂಗಳು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಎಂಡಿಆರ್ ಮೇಲೆ ಶೇ.18 ರಷ್ಟು ಶುಲ್ಕ ವಿಧಿಸುವ ಬಗ್ಗೆ ಮುಂದಿನ ತಿಂಗಳು ತೀರ್ಮಾನಿಸಲಾಗುತ್ತದೆ.
ಉದಾಹರಣೆಗೆ ಗ್ರಾಹಕರು 10000 ರೂ. ವಹಿವಾಟು ನಡೆಸಿದರೆ
40 ರೂ. ಎಂಡಿಆರ್ ವಿಧಿಸಲಾಗುತ್ತದೆ. ಇದರ ಮೇಲೆ ಶೇ.18 ರಷ್ಟು ಜಿಎಸ್‌ಟಿ ಎಂದರೆ 7.2 ರೂ. ಆಗುತ್ತದೆ. ಹೀಗಾಗಿ ಒಟ್ಟು 10000 ರೂ. ವಹಿವಾಟಿಗೆ 47.2 ರೂ. ಎಂಡಿಆರ್ ಕಟ್ಟಬೇಕಾಗುತ್ತದೆ.
ವೃತ್ತಿಪರತೆಯಿಂದ ಎಂಡಿಆರ್ ಜಾರಿ: ವಿತ್ತ ಸಚಿವೆ ನಿರ್ಮಲಾ ಯುಪಿಐ ಪಾವತಿಗಳ ಮೇಲಿನ ಎಂಡಿಆರ್ ವ್ಯವಸ್ಥೆ ಹಿಂದೆ ವೃತ್ತಿಪರತೆಯಿದೆ. ಇದರ ಜಾರಿಗೆ ಅಮೆರಿಕ ಒತ್ತಡ ಹೇರಿತ್ತು ಎಂಬುದು ಶುದ್ಧ ಸುಳ್ಳು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಎನ್‌ಸಿಪಿಐ, ಪೇಮೆಂಟ್ ಬ್ಯಾಂಕ್‌ಗಳು ಜಂಟಿಯಾಗಿ ಈ ನಿರ್ಧಾರ ಕೈಗೊಂಡಿವೆ ಎಂದು ಹೇಳಿದ್ದಾರೆ.

