HEALTH TIPS

ಸಿಕ್ಕಿಂನಲ್ಲಿರುವ 40 ಹಿಮ ಸರೋವರಗಳಲ್ಲಿ 16 ಅತ್ಯಧಿಕ ಅಪಾಯಕಾರಿ

ಗ್ಯಾಂಗ್‌ಟಕ್: ಹಿಮಾಲಯದ ಪೂರ್ವಕ್ಕಿರುವ ಸಿಕ್ಕಿಂ ರಾಜ್ಯದಲ್ಲಿ 40 ಅಪಾಯಕಾರಿ ಹಿಮ ಸರೋವರಗಳನ್ನು ಗುರುತಿಸಲಾಗಿದ್ದು, ಆ ಪೈಕಿ 16 ಸರೋವರಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿವೆ ಎಂದು ವರದಿಯಾಗಿದೆ. ಅವು ಯಾವುದೇ ಸಂದರ್ಭ ಕುಸಿದು ಕೆಳ ಪ್ರದೇಶಗಳಿಗೆ ನೀರು ನುಗ್ಗಬಹುದು ಎಂದೂ ವರದಿ ಹೇಳಿದೆ.


ಹಿಮಬಂಡೆಗಳು ಕುಸಿದು ನೇಪಾಳದಲ್ಲಿ ಭೀಕರ ಪ್ರವಾಹ ಸಂಭವಿಸಿರುವ ಹೊತ್ತಿನಲ್ಲೇ ಈ ವರದಿ ಬಂದಿದ್ದು, ಈ ಭಾಗದ ಜನರಿಗೆ ಎಚ್ಚರಿಕೆ ಗಂಟೆಯಾಗಿದೆ.

ಈ ಹಠಾತ್ ಪ್ರವಾಹವು ಹಿಮಾಲಯದಾದ್ಯಂತ ವ್ಯಾಪಕ ಪರಿವರ್ತನೆಯನ್ನು ಎತ್ತಿ ತೋರಿಸಿದೆ. ನೀರ್ಗಲ್ಲುಗಳು ಕರಗುತ್ತಿದ್ದು, ಅವುಗಳ ಸ್ಥಳದಲ್ಲಿ ಹೊಸ ಸರೋವರಗಳು ರೂಪುಗೊಳ್ಳುತ್ತಿವೆ. ಅಸ್ತಿತ್ವದಲ್ಲಿರುವ ಸರೋವರಗಳ ವಿಸ್ತಾರ ಹೆಚ್ಚುತ್ತಿದೆ.

ನೀರ್ಗಲ್ಲು ಅಥವಾ ಹಿಮಬಂಡೆ ಕರಗುವುದರಿಂದ ಹಿಮ ಸರೋವರಗಳು ರೂಪುಗೊಳ್ಳುತ್ತವೆ. ಉಷ್ಣಾಂಶ ಹೆಚ್ಚಳ, ಭೂಕಂಪದಿಂದ ಅಲುಗಾಡಿ ಈ ನೀರ್ಗಲ್ಲು ಕುಸಿಯುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಈ ರೀತಿ ಉಂಟಾಗುವ ಪ್ರವಾಹವು ಗಮನಾರ್ಹ ವಿನಾಶ ಸೃಷ್ಟಿಸುತ್ತದೆ. ಪರ್ವತಗಳ ಕೆಳಭಾಗದ ಪ್ರದೇಶಗಳಿಗೆ ದೊಡ್ಡ ಗಂಡಾಂತರವಾಗಬಹುದು ಎಂದೂ ವರದಿ ಹೇಳಿದೆ.

ಸಿಕ್ಕಿಂನಲ್ಲಿ 2023ರ ಅಕ್ಟೋಬರ್‌ನಲ್ಲಿ ಸಂಭವಿಸಿದ ನೀರ್ಗಲ್ಲು ಸ್ಫೋಟವು 60 ಜನರ ಜೀವ ತೆಗೆದಿತ್ತು. ಮಂಗನ್, ಗ್ಯಾಂಗ್‌ಟಕ್, ಪಕ್ಯೊಂಗ್ ಮತ್ತು ನಾಮ್ಚಿ ಜಿಲ್ಲೆಗಳಲ್ಲಿ ಭಾರಿ ಹಾನಿ ಉಂಟು ಮಾಡಿತ್ತು. ಸಿಕ್ಕಿಂನ ಪ್ರಮುಖ ಜಲವಿದ್ಯುತ್ ಯೋಜನೆಗೆ ಆಧಾರವಾಗಿದ್ದ ಚುಂಗ್‌ಥಾಂಗ್ ಅಣೆಕಟ್ಟನ್ನು ನಾಶ ಮಾಡಿತ್ತು.

ಹಿಮ ಸರೋವರ ಒಡೆಯುವುದರಿಂದ ಉಂಟಾಗುವ ಪ್ರವಾಹ ಕುರಿತಾದ ಕಾರ್ಯಾಗಾರವೊಂದರಲ್ಲಿ ಮಾತನಾಡಿದ ಸಿಕ್ಕಿಂನ ಹಿರಿಯ ಅಧಿಕಾರಿ ಪ್ರವೀಣ್ ತಂಬೆ, ಹಿಮ ಸರೋವರಗಳಲ್ಲಿ ಆಗುವ ಬದಲಾವಣೆ ಗುರುತಿಸಲು ರಿಮೋಟ್ ಸೆನ್ಸಿಂಗ್ ಮತ್ತು ಉಪಗ್ರಹ ಚಿತ್ರಗಳ ವಿಶ್ಲೇಷಣೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ಅಪಾಯಕಾರಿ 40 ಸರೋವರಗಳ ಪೈಕಿ, 16 'ಎ' ವರ್ಗ(ಅತ್ಯಧಿಕ ಅಪಾಯ), ಎರಡು 'ಬಿ' ವರ್ಗ(ಅಧಿಕ ಅಪಾಯ) ಮತ್ತು ಒಂಬತ್ತು 'ಸಿ' ವರ್ಗದಲ್ಲಿ (ಮಧ್ಯಮದಿಂದ ಕಡಿಮೆ ಅಪಾಯ) ಇವೆ. 13 ಸರೋವರಗಳನ್ನು ಇನ್ನೂ ವರ್ಗೀಕರಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries