HEALTH TIPS

ಹುಚ್ಚ ಎಂದವರ ಎದುರೇ ಕೊಳಕು ನದಿಗಿಳಿದು ಸ್ವಚ್ಛಗೊಳಿಸಿ ದೇಶದ ಗಮನ ಸೆಳೆದ 20ರ ಯುವಕ

 ಮಧ್ಯಪ್ರದೇಶಮಧ್ಯಪ್ರದೇಶದ 20 ವರ್ಷದ ಬಿಎಸ್‌ಸಿ ವಿದ್ಯಾರ್ಥಿ ಸುರೇಂದ್ರ ಸಿಂಗ್ ಚೌಧರಿ, ಕಲುಷಿತಗೊಂಡಿದ್ದ ಅಜ್ನಾರ್ ನದಿಯನ್ನು ಸ್ವತಃ ಕೈಯಾರೆ ಸ್ವಚ್ಛಗೊಳಿಸಿ ಮಾದರಿಯಾಗಿದ್ದಾರೆ. 



ಈ ಸ್ವಚ್ಛತಾ ಕಾರ್ಯದ ಹಿಂದಿನ ಉದ್ದೇಶವೇನು?

ಪ್ಲಾಸ್ಟಿಕ್, ಕಸ ಮತ್ತು ಪಾಚಿಯಿಂದ ತುಂಬಿದ್ದ ನದಿಯನ್ನು ಕಂಡು ಮರುಗಿದ ಸುರೇಂದ್ರ, ನದಿಯನ್ನು ಕಸದ ತೊಟ್ಟಿಯನ್ನಾಗಿ ಮಾಡಿದ್ದ ಸಮಾಜದ ಮನಸ್ಥಿತಿಯನ್ನು ಬದಲಿಸಲು ಈ ಅಭಿಯಾನ ಕೈಗೊಂಡರು.


ಈ ಕಾರ್ಯದಲ್ಲಿ ಅವರು ಎದುರಿಸಿದ ಸವಾಲುಗಳೇನು?

ಆರ್ಥಿಕ ಸಮಸ್ಯೆಯಿಂದಾಗಿ ಯಾವುದೇ ಯಂತ್ರಗಳಿಲ್ಲದೆ ಸ್ವತಃ ಕೈಯಾರೆ ಕೆಲಸ ಮಾಡಿದರು. ಅಲ್ಲದೆ, ಕೊಳಚೆ ನೀರಿನಿಂದ ಸೋಂಕು ಮತ್ತು ಹಾವುಗಳ ಕಾಟದ ನಡುವೆಯೂ ತಿಂಗಳುಗಟ್ಟಲೆ ಶ್ರಮಿಸಿದರು.


ಜನರು ಮತ್ತು ಗಣ್ಯರು ಹೇಗೆ ಪ್ರತಿಕ್ರಿಯಿಸಿದರು?

ಆರಂಭದಲ್ಲಿ ಜನರು 'ಹುಚ್ಚ' ಎಂದು ಹೀಯಾಳಿಸಿದ್ದರು. ಆದರೆ, ನದಿ ಸ್ವಚ್ಛವಾದ ನಂತರ ಆನಂದ್ ಮಹೀಂದ್ರಾ ಸೇರಿದಂತೆ ಹಲವು ಖ್ಯಾತನಾಮರು ಯುವಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ಈ ಘಟನೆಯಿಂದ ಸಾರ್ವಜನಿಕರ ಅಭಿಪ್ರಾಯವೇನು?

ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಹುದು ಎಂದು ಅನೇಕರು ಶ್ಲಾಘಿಸುತ್ತಿದ್ದರೂ, ಸರ್ಕಾರಿ ಆಡಳಿತ ಮಂಡಳಿಗಳು ಶಾಶ್ವತ ತ್ಯಾಜ್ಯ ನಿರ್ವಹಣೆಗೆ ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.

ಪ್ರಮುಖ ಅಂಕಿಅಂಶಗಳು

20ಯುವಕನ ವಯಸ್ಸು30000ಸ್ವಚ್ಛತಾ ಕಾರ್ಯಕ್ಕಾಗಿ ಖರ್ಚು ಮಾಡಿದ ಮೊತ್ತ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಬ್ಯಾವರಾ ಪಟ್ಟಣದ 20 ವರ್ಷದ ಯುವಕ ಕಲುಷಿತಗೊಂಡಿದ್ದ ಅಜ್ನಾರ್ ನದಿಯನ್ನು ಸ್ವತಃ ಕೈಯಾರೆ ಸ್ವಚ್ಛಗೊಳಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಈ ಯುವಕನ ಪರಿಸರ ಕಾಳಜಿಗೆ ಖ್ಯಾತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಸೇರಿದಂತೆ ಲಕ್ಷಾಂತರ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಅಜ್ನಾರ್ ನದಿ ಪ್ಲಾಸ್ಟಿಕ್ ತ್ಯಾಜ್ಯ, ಕಸದ ರಾಶಿ ಹಾಗೂ ಪಾಚಿಯಿಂದ ಕಲುಷಿತಗೊಂಡಿತ್ತು. ನದಿಯ ಈ ಸ್ಥಿತಿ ಕಂಡು ಮರುಗಿದ ಯುವಕ ತಾನೇ ನೀರಿಗಿಳಿದು ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದ. ಅಲ್ಲಿ ಯಾವುದೇ ಸರ್ಕಾರಿ ನೌಕರರಾಗಲಿ, ಯಂತ್ರಗಳಾಗಲಿ ಅಥವಾ ಆಡಳಿತ ಮಂಡಳಿಯಾಗಲಿ ಇರಲಿಲ್ಲ. ಇದ್ದದ್ದು ಒಬ್ಬನೇ ಯುವಕ ಮತ್ತು ಆತನ ದೃಢ ನಿರ್ಧಾರ.

ಇಂದು ಸಾಮಾಜಿಕ ಮಾಧ್ಯಮದಲ್ಲಿ 'ಬಿಟ್ಟು ತಬಾಹಿ' ಎಂದೇ ಖ್ಯಾತಿ ಪಡೆದುಕೊಂಡಿರುವ ಬಿಎಸ್‌ಸಿ ವಿದ್ಯಾರ್ಥಿ ಸುರೇಂದ್ರ ಸಿಂಗ್ ಚೌಧರಿ, ನದಿಯನ್ನು ಕಸದ ತೊಟ್ಟಿಯನ್ನಾಗಿ ಮಾಡಿದ್ದ ಸಮಾಜದ ಮನಸ್ಥಿತಿಯನ್ನೇ ಅಳಿಸಿ ಹಾಕಲು ಪಣತೊಟ್ಟ.

ಬರಿಗೈನಲ್ಲಿ ಶುರುವಾದ ನದಿ ಶುದ್ಧೀಕರಣ ಅಭಿಯಾನ..

ಕಸ ತೆರವುಗೊಳಿಸುವ ಆರಂಭದಲ್ಲಿ ಯಂತ್ರವೊಂದನ್ನು ತರಲು ಬಯಸಿದ್ದ ಸುರೇಂದ್ರ, ಹಣದ ಅಭಾವದಿಂದಾಗಿ ತಮ್ಮ ಬರಿಗೈಗಳನ್ನೇ ನಂಬಿ ನದಿಗಿಳಿದರು. ಆ ನದಿಯಲ್ಲಿದ್ದ ಪ್ಲಾಸ್ಟಿಕ್ ಹಾಗೂ ತ್ಯಾಜ್ಯವನ್ನು ತೆರವುಗೊಳಿಸಿದ್ದಲ್ಲದೆ, ತ್ಯಾಜ್ಯದಿಂದ ಗೊಬ್ಬರ ತಯಾರಿಸಲು ಆರಂಭಿಸಿದರು. ಸುಮಾರು ₹30 ಸಾವಿರ ಖರ್ಚು ಮಾಡಿ ಉಪಕರಣ ಹಾಗೂ ಕಸದ ಬುಟ್ಟಿಗಳನ್ನು ಖರೀದಿಸಿದರು.

ನಿರಂತರ ಕೊಳಚೆ ನೀರಿನಿಂದ ಆತನ ಕೈ -ಕಾಲುಗಳಿಗೆ ಸೋಂಕು ತಗುಲಿತ್ತು. ಆದರೂ ಲೆಕ್ಕಿಸದೆ ತಿಂಗಳುಗಟ್ಟಲೆ ಸುರೇಂದ್ರ ಶ್ರಮಿಸಿದರು. ಅಷ್ಟೇ ಅಲ್ಲದೇ ಈ ಕೆಲಸದ ವೇಳೆ ಹಾವುಗಳಿಂದ ಪಾರಾಗುವ ಪರಿಸ್ಥಿತಿ ಎದುರಿಸಬೇಕಾಯಿತು.

ಇನ್ನು ಸುರೇಂದ್ರ, ಸಾಮಾಜಿಕ ಜಾಲತಾಣಗಳಲ್ಲಿ ಸ್ವಚ್ಛತಾ ಕಾರ್ಯದ ವಿಡಿಯೊಗಳನ್ನು ಹಂಚಿಕೊಂಡಾಗ ಹಲವರು 'ಕೇವಲ ಹೆಚ್ಚು ವೀಕ್ಷಣೆ ಪಡೆಯಲು ನಾಟಕ ಮಾಡುತ್ತಿದ್ದಾನೆ', 'ಹುಚ್ಚ' ಎಂದು ಹೀಯಾಳಿಸಿದ್ದರು. ಆದರೆ ಯಾವುದೇ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಸುರೇಂದ್ರ, ನದಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ನಂತರ ನದಿಗೆ ಮರುಜೀವ ನೀಡಿದ್ದನ್ನು ಹಂಚಿಕೊಂಡಿದ್ದರು.

ಇದೀಗ ಸುರೇಂದ್ರ ಅವರ ಈ ನಿಸ್ವಾರ್ಥದ ಕೆಲಸಕ್ಕೆ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ, ನಟಿ ಚಿತ್ರಾಂಗದಾ ಸಿಂಗ್ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೆಲ ನೆಟ್ಟಿಗರು, 'ಕೇವಲ ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಏನನ್ನೂ ಬೇಕಾದರೂ ಸಾಧಿಸಬಹುದು', '20 ವರ್ಷದ ವಿದ್ಯಾರ್ಥಿಯೊಬ್ಬ ಬರಿಗೈನಲ್ಲಿ ಬಳಸಿ ಏಕೆ ಬರಬೇಕು'?, 'ಆಡಳಿತ ಮಂಡಳಿ ಯಂತ್ರವನ್ನು ಬಳಿಸಿ ಶಾಶ್ವತ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಮಾಡಬೇಡವೇ' ಎಂದು ಪ್ರಶ್ನೆ ಎತ್ತುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries