HEALTH TIPS

ಬ್ಯಾಂಕ್ ಮುಷ್ಕರ ರದ್ದು: ಸತತ 7 ದಿನ ಕೆಲಸ; ಬ್ಯಾಂಕ್ ಉದ್ಯೋಗಿಗಳ ಸ್ಥಿತಿ ಕುರಿತು ಮೀಮ್‌ಗಳ ಸುರಿಮಳೆ

ನವದೆಹಲಿ: ಮೂರು ದಿನಗಳ ಬ್ಯಾಂಕ್ ಮುಷ್ಕರ ರದ್ದುಗೊಂಡಿರುವುದರಿಂದ ಬ್ಯಾಂಕ್ ಉದ್ಯೋಗಿಗಳು ಈ ವಾರ ಸತತ ಏಳು ದಿನ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾಂಕ್ ಉದ್ಯೋಗಿಗಳ ಸ್ಥಿತಿಯನ್ನು ಬಿಂಬಿಸುವ ಮೀಮ್‌ಗಳ ಸುರಿಮಳೆಯಾಗಿದೆ. 


'ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್' (IBA) ಜೊತೆ ನಡೆದ ಕೊನೆಯ ಕ್ಷಣದ ಸಭೆಯ ಬಳಿಕ 'ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್' (UFBU), ದೇಶದಾದ್ಯಂತ ನಡೆಯಬೇಕಿದ್ದ ಮುಷ್ಕರವನ್ನು ಆರಂಭವಾಗಲು ಕೆಲವೇ ಗಂಟೆಗಳು ಬಾಕಿ ಇರುವಾಗ ಮುಂದೂಡಿತು.

ಮುಷ್ಕರ ನಡೆಯುವ ಮುನ್ನವೇ ರವಿವಾರ ಕೆಲಸ ಮಾಡಿದ್ದ ಬ್ಯಾಂಕ್ ಉದ್ಯೋಗಿಗಳನ್ನು ಕೇಂದ್ರೀಕರಿಸಿ ಹಲವು ಮೀಮ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಮುಷ್ಕರ ಮುಂದೂಡಿಕೆಯಾಗಿರುವುದರಿಂದ ಉದ್ಯೋಗಿಗಳು ಸೋಮವಾರದಿಂದ ಶುಕ್ರವಾರದವರೆಗೆ ಹಾಗೂ ಬಳಿಕ ಶನಿವಾರ (ಅಕ್ಟೋಬರ್ 3) ಕೂಡ ಕೆಲಸ ಮಾಡಬೇಕಿದೆ. ಹೀಗಾಗಿ ಈ ವಾರ ಸತತ ಏಳು ದಿನ ಕರ್ತವ್ಯ ನಿರ್ವಹಿಸಬೇಕಾದಂತಾಗಿದೆ.

ಒಂದು ಮೀಮ್‌ನಲ್ಲಿ, 'ರವಿವಾರ ಕೆಲಸ ಮಾಡಿದ ಬ್ಯಾಂಕ್ ಉದ್ಯೋಗಿಗಳು ಮೂರು ದಿನಗಳ ಮುಷ್ಕರ ರದ್ದಾಗಿರುವುದನ್ನು ನೋಡುತ್ತಿರುವಾಗ' ಎಂಬ ಬರಹದೊಂದಿಗೆ 'ಜೈಲರ್' ಚಿತ್ರದಲ್ಲಿ ರಜನಿಕಾಂತ್ ಅವರು ಬೇಸರದಿಂದ ಕಾಣಿಸಿಕೊಳ್ಳುವ ದೃಶ್ಯವನ್ನು ಬಳಸಲಾಗಿದೆ.

ಮತ್ತೊಂದು ಮೀಮ್‌ನಲ್ಲಿ, 'ರವಿವಾರ ಕೆಲಸ ಮಾಡಿದ ಬಳಿಕ ಮುಷ್ಕರ ರದ್ದಾದಾಗ ಬ್ಯಾಂಕ್ ಉದ್ಯೋಗಿಗಳ ಸ್ಥಿತಿ' ಎಂಬ ಬರಹವಿದೆ. 'ಜಾನ್-ಎ-ಮನ್' ಚಿತ್ರದಲ್ಲಿ ಸಲ್ಮಾನ್ ಖಾನ್ ಅವರ ಪಾತ್ರವು ಈ ಘೋಷಣೆಯಿಂದ ಬೇಸರಗೊಂಡಿರುವ ದೃಶ್ಯವನ್ನು ಅದರಲ್ಲಿ ಬಳಸಲಾಗಿದೆ.

ಮುಷ್ಕರ ರದ್ದಾದ ಬಳಿಕ ಉದ್ಯೋಗಿಗಳ ನಿರಾಶೆಯನ್ನು ಬಿಂಬಿಸಲು ವಿವಿಧ ಚಲನಚಿತ್ರಗಳ ದೃಶ್ಯಗಳು ಮತ್ತು ಗ್ರಾಫಿಕ್ಸ್‌ ಗಳನ್ನು ಸೃಜನಾತ್ಮಕವಾಗಿ ಬಳಸಿರುವ ಇಂತಹ ಇನ್ನೂ ಹಲವು ಮೀಮ್‌ ಗಳು ಆನ್‌ಲೈನ್‌ ನಲ್ಲಿ ಕಾಣಿಸಿಕೊಂಡಿವೆ.

ಹಲವು ವಿಷಯಗಳಲ್ಲಿ ಒಪ್ಪಂದ

UFBU ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಬ್ಯಾಂಕ್ ಒಕ್ಕೂಟವು ರವಿವಾರ ರಾತ್ರಿ 9.30ಕ್ಕೆ IBAಯನ್ನು ಭೇಟಿಯಾಯಿತು. ಮಾತುಕತೆ ಬಳಿಕ ಹಲವು ವಿಷಯಗಳಲ್ಲಿ ಎರಡೂ ಕಡೆಯವರು ಒಪ್ಪಂದಕ್ಕೆ ಬಂದಿದ್ದಾರೆ.

ಎಲ್ಲಾ ಶನಿವಾರಗಳನ್ನು ಬ್ಯಾಂಕ್ ರಜಾದಿನಗಳನ್ನಾಗಿ ಮಾಡುವ ಕುರಿತು ಪರಿಶೀಲಿಸಲು IBA ಮತ್ತು UFBUಯ ಜಂಟಿ ಸಮಿತಿಯನ್ನು ತಕ್ಷಣವೇ ರಚಿಸಲು ನಿರ್ಧರಿಸಲಾಗಿದೆ. ಸಮಿತಿಯು ಈ ಕುರಿತು ಲಭ್ಯವಿರುವ ಎಲ್ಲ ಆಯ್ಕೆಗಳನ್ನು ಪರಿಶೀಲಿಸಲಿದೆ. ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಿ, ವಿಶೇಷವಾಗಿ ಗ್ರಾಹಕರಿಗೆ ಅನುಕೂಲವಾಗುವ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಿದೆ.

ಸ್ಕೇಲ್ IV ಮತ್ತು ಅದಕ್ಕಿಂತ ಮೇಲಿನ ಶ್ರೇಣಿಯ ಅಧಿಕಾರಿಗಳಿಗೆ PLI (ಪರ್ಫಾರ್ಮೆನ್ಸ್ ಲಿಂಕ್ಡ್ ಇನ್ಸೆಂಟಿವ್) ಯೋಜನೆಯಲ್ಲಿ ಮಾಡಲಾಗಿರುವ ಬದಲಾವಣೆಗಳ ಕುರಿತು IBA ಜೊತೆ ಮಾತುಕತೆ ಆರಂಭಿಸಲಾಗುವುದು. ಅಧಿಕಾರಿಗಳ ಆತಂಕಗಳು ಅಥವಾ ಬೇಡಿಕೆಗಳನ್ನು ಸರಕಾರದ ಮುಂದೆ ಮಂಡಿಸಲು ಸಾಧ್ಯವಾಗುವಂತೆ ಈ ಮಾತುಕತೆ ನಡೆಯಲಿದೆ.

ಮಾರ್ಚ್ 8, 2024ರಂದು ನಡೆದ ಸಭೆಯ ನಡಾವಳಿಗಳಲ್ಲಿ ಪಟ್ಟಿ ಮಾಡಲಾಗಿರುವ ಇತರ ಬಾಕಿ ಇರುವ ವಿಷಯಗಳ ಬಗ್ಗೆಯೂ ಎರಡೂ ಕಡೆಯವರು ಚರ್ಚಿಸಲಿದ್ದಾರೆ. ಈ ಎಲ್ಲ ವಿಷಯಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವ ಗುರಿಯನ್ನು ಹೊಂದಲಾಗಿದೆ. 





 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries