HEALTH TIPS

ಪ್ರತಿಯೊಬ್ಬ ವ್ಯಕ್ತಿಯ ಕಲ್ಯಾಣ ಅಭಿವೃದ್ಧಿಯ ಉದ್ದೇಶವಾಗಿರಬೇಕು: ಮೋಹನ್‌ ಭಾಗವತ್‌

ಯವತ್‌ಮಾಲ್ (PTI): ಅಭಿವೃದ್ಧಿಯು ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣದ ಉದ್ದೇಶವನ್ನು ಹೊಂದಿರಬೇಕು ಹಾಗೂ ಉನ್ನತ ಮತ್ತು ಕೆಳಮಟ್ಟದ ಅಭಿವೃದ್ಧಿಯ ನಡುವಿನ ಅಂತರ ಸಾಧ್ಯವಾದಷ್ಟು ಕಡಿಮೆ ಇರಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಮಂಗಳವಾರ ಹೇಳಿದರು. 


ಪಂಡೀತ್‌ ದೀನದಯಾಳ್‌ ಉಪಾಧ್ಯಾಯ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ದೇಶವು ಸಂತೋಷವಾಗಿರಬೇಕು ಎಂದರೆ ಸಮಾಜದ ಕಟ್ಟಕಡೆಯ ವ್ಯಕ್ತಿಯು ಸಂತೋಷವಾಗಿರಬೇಕು. ಇದನ್ನೇ ಅಂತ್ಯೋದಯ ಎನ್ನಲಾಗುತ್ತದೆ. ಅಭಿವೃದ್ಧಿ ಎಂದರೆ ಎಲ್ಲರೂ ಒಂದೇ ಸಮನಾಗಿ ಇರಬೇಕೆಂದಲ್ಲ ಆದರೆ ಅಂತರವು ಕಡಿಮೆ ಇರಬೇಕು' ಎಂದರು.

ಯಾವುದೇ ನಿರ್ಧಾರ ಕೈಗೊಳ್ಳುವಾಗ ಸಮಾಜದ ಕೆಳ ಹಂತದ ವ್ಯಕ್ತಿಯ ಬಗ್ಗೆ ಯೋಚಿಸಬೇಕು ಎಂಬ ಮಹಾತ್ಮ ಗಾಂಧಿ ಅವರ ತತ್ವದ ಬಗ್ಗೆ ಉಲ್ಲೇಖ ಮಾಡಿದ ಭಾಗವತ್‌, 'ಜೀವನದಲ್ಲಿ ಏನಾದರೂ ಮಾಡುವಾಗ, ಸಮಾಜದ ಕಟ್ಟಕಡೆಯಲ್ಲಿರುವ ವ್ಯಕ್ತಿಯ ಬಗ್ಗೆ ಯೋಚಿಸಿ. ನಾನು ಮಾಡುತ್ತಿರುವುದು ಅವರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆಯೇ ಎಂದು ನಿಮ್ಮನ್ನು ನೀವು ಕೇಳಿಕೊಳ್ಳಿ. ಅದು ಸಾಧ್ಯವಾಗದಿದ್ದರೆ ಆ ಕೆಲಸ ಮಾಡಬೇಡಿ' ಎಂದು ಸಲಹೆ ನೀಡಿದರು.‌

'ಪ್ರಕೃತಿಯನ್ನು ಬಲಿತೆಗೆದುಕೊಂಡು ಅಭಿವೃದ್ಧಿಯಾಗಬಾರದು. ಅಭಿವೃದ್ಧಿ ಮತ್ತು ಪರಿಸರ ಎರಡರ ರಕ್ಷಣೆಯು ಆಗಬೇಕು' ಎಂದು ಹೇಳಿದರು.

ರೈತರ ಕಲ್ಯಾಣದ ಬಗ್ಗೆ ಮಾತನಾಡಿದ ಭಾಗವತ್‌ ಅವರು, 'ರೈತರು ಸಾಲದ ಸುಳಿಗೆ ಸಿಲುಕದೇ, ಸ್ವಾವಲಂಬಿಗಳಾಗಬೇಕು' ಎಂದು ತಿಳಿಸಿದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries