ಕಾಸರಗೋಡು: ಪತ್ನಿ ನೇಣು ಬಿಗಿದು ಆತ್ಮಹತ್ಯೆಗೈದ ಒಂದೇ ತಿಂಗಳ ಅಂತರದಲ್ಲಿ ಪತಿಯೂ ನೇಣಿಗೆ ಶರಣಾಗಿದ್ದಾನೆ. ವೆಳ್ಳರಿಕ್ಕುಂಡ್ ಪೆÇಲೀಸ್ ಠಾಣಾ ವ್ಯಾಪ್ತಿಯ ಪರಪ್ಪ ಬಿರಿಕುಳಂ, ಕುರುಂಬಾಯಿಯ ಕೆ. ಪವಿತ್ರನ್ (58) ಮೃತಪಟ್ಟವರು. ಇವರ ಮೃತದೇಹ ಪತ್ನಿ ನೇಣು ಬಿಗಿದು ಆತ್ಮಹತ್ಯೆಗೈದ ಅದೇ ಫ್ಯಾನಿನಲ್ಲಿ ಇವರು ಸಹ ನೇಣು ಬಿಗಿದುಕೊಂಡಿದ್ದರು. ಉತ್ತಮ ಕೃಷಿಕರಾಗಿದ್ದರು.
ಗುರುವಾರ ರಾತ್ರಿ ಮಲಗುವ ಕೋಣೆಯ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪವಿತ್ರನ್ ಅವರ ಮೃತದೇಹ ಪತ್ತೆಯಾಗಿದೆ. ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ಕೆಲಸಕ್ಕೆ ತೆರಳಿದ್ದ ಪುತ್ರ ಮನೆಗೆ ವಾಪಸಾದಾಗ ಪವಿತ್ರನ್ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ವೆಳ್ಳರಿಕ್ಕುಂಡ್ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


