ಪೆರ್ಲ: ನಾಲಂದ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಎನ್‍ಎಸ್‍ಎಸ್ ಘಟಕ ಸಂಖ್ಯೆ 49ರ ನೇತೃತ್ವದಲ್ಲಿ, ಐಕ್ಯೂಎಸಿ ಹಾಗೂ ಕಾಲೇಜು ಪ್ರೊಟೆಕ್ಷನ್ ಗ್ರೂಪ್‍ಗಳ ಸಹಯೋಗದಲ್ಲಿ ಮಾದಕವಸ್ತು ವಿರೋಧಿ ಮತ್ತು ರ್ಯಾಗಿಂಗ್ ವಿರೋಧಿ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪಪ್ರಾಂಶುಪಾಲ ಶಂಕರ ಖಂಡಿಗೆ ವಹಿಸಿದ್ದರು. ಬದಿಯಡ್ಕ ಪೋಲೀಸ್ ಠಾಣೆಯ ಸಿವಿಲ್ ಪೋಲೀಸ್ ಅಧಿಕಾರಿ ರಜೀಶ್ ಸಿ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ರ್ಯಾಗಿಂಗ್ ಹಾಗೂ ಮಾದಕವಸ್ತುಗಳ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು. ರ್ಯಾಗಿಂಗ್‍ನಿಂದ ಉಂಟಾಗಬಹುದಾದ ಸಾಮಾಜಿಕ, ಮಾನಸಿಕ ಹಾಗೂ ಕಾನೂನು ಸಂಬಂಧಿತ ಪರಿಣಾಮಗಳ ಕುರಿತು ಅವರು ವಿವರಿಸಿದರು. ಮಾದಕವಸ್ತುಗಳ ಬಳಕೆಯಿಂದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಕುಟುಂಬದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ವಿವರಿಸಿ, ಮಾದಕವಸ್ತುಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಯೋಜನಾಧಿಕಾರಿ ವರ್ಷಿತ್ ಕೆ, ಐಕ್ಯೂಎಸಿ ಸಂಯೋಜಕಿ ಮಧುಶ್ರೀ, ಉಪನ್ಯಾಸಕ ಉಪನ್ಯಾಸಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಎನ್‍ಎಸ್‍ಎಸ್ ಸ್ವಯಂಸೇವಕಿ ಶರಣ್ಯ ಸ್ವಾಗತಿಸಿದರು. ಪವನ್‍ರಾಜ್ ಕಾರ್ಯಕ್ರಮ ನಿರೂಪಿಸಿದರು. ಎನ್‍ಎಸ್‍ಎಸ್ ಸ್ವಯಂಸೇವಕಿ ಕಾವ್ಯ ವಂದನಾರ್ಪಣೆ ಸಲ್ಲಿಸಿದರು.
ವಿದ್ಯಾರ್ಥಿಗಳಲ್ಲಿ ರ್ಯಾಗಿಂಗ್ ಹಾಗೂ ಮಾದಕವಸ್ತುಗಳ ವಿರುದ್ಧ ಅರಿವು ಮೂಡಿಸುವಲ್ಲಿ ಕಾರ್ಯಕ್ರಮವು ಮಹತ್ವದ ಪಾತ್ರವಹಿಸಿತು.

.jpg)
.jpg)
