ಕಾಸರಗೋಡು: ನಗರದ ಕೋಟೆಕಣಿ ಶ್ರೀರಾಮನಾಥ ಸಾಂಸ್ಕøತಿಕ ಭವನ ಸಮಿತಿ ವತಿಯಿಂದ 24ನೇ ವರ್ಷದ ಶ್ರೀಕೃಷ್ಣ ಜಯಂತ್ಯುತ್ಸವ, ಹದಿನೈದನೇ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ಶ್ರೀಕೃಷ್ಣ ವೇಷಸ್ಪರ್ಧೆ ಕೋಟೆಕಣಿ ಸಾಂಸ್ಕøತಿಕ ಭವನದಲ್ಲಿ ಜರುಗಿತು.
ಈ ಸಂದರ್ಭ ಕಂದಕೃಷ್ಣ, ಮುದ್ದುಕೃಷ್ಣ, ಬಾಲಕೃಷ್ಣ, ಬಾಲರಾಧೆ, ಶ್ರೀಕೃಷ್ಣ, ರಾಧೆ, ಯಶೋಧಕೃಷ್ಣ, ರಾಧ ಮತ್ತು ಕೃಷ್ಣ ಹಾಗೂ ಗೀತೋಪದೇಶ ಸ್ಪರ್ಧೆ ಆಯೋಜಿಸಲಾಯಿತು. ಕೊರಕ್ಕೋಡು ಶ್ರೀ ಆರ್ಯಕಾತ್ರ್ಯಾಯಿನಿ ದೇವಸ್ಥಾನದ ಆಡಳಿತದರ ಪುರುಷೋತ್ತಮ ರಾವ್ ಧರೇಕರ್ ಸಮಾರಂಭ ಉದ್ಘಾಟಿಸಿದರು. ಕಾರ್ಯಖ್ರಮದ ಅಂಗವಾಘಿ ಮೊಸರುಕುಡಿಕೆ ಸ್ಪರ್ಧೆ ನಡೆಯಿತು.


