ಪೆರ್ಲ: ಪೆರ್ಲ ಖಂಡಿಗೆ ಪೂಪಾಡಿಕಲ್ಲು ಶ್ರೀಕೃಷ್ಣ ಸೇವಾ ಸಮಿತಿ ವತಿಯಿಂದ ನಡೆದ ಶ್ರೀಕೃಷ್ಣ ಜಯಂತ್ಯುತ್ಸವವನ್ನು ಖ್ಯಾತ ವೈದ್ಯ ಡಾ. ಶ್ಯಾಮ್ ಪ್ರಕಾಶ್ ಕಾಟಿಪಳ್ಳ ಉದ್ಘಾಟಿಸಿದರು. ಸಂಜೆ ನಡೆದ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ವಿದ್ವಾನ್ ವೇದಮೂರ್ತಿ ಹಿರಣ್ಯ ವೆಂಕಟೇಶ್ವರ ಭಟ್ ಧಾರ್ಮಿಕ ಭಾಷಣ ಮಾಡಿದರು. ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾವತಿ ಟೀಚರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಾಧಕರಿಗೆ ಸನ್ಮಾನ, ಅಭಿನಂದನೆ, ಯಕ್ಷಗಾನ ತಾಳಮದ್ದಳೆ'ಕರ್ಣಾರ್ಜುನ ಕಾಳಗ' ನಡೆಯಿತು. ಈ ಸಂದರ್ಭ ಖಂಡಿಗೆ ಪೂಪಾಡಿಕಲ್ಲಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀಕೃಷ್ಣ ನೂತನ ಮಂದಿರದ ವಿಜ್ಞಾಪನಾ ಪತ್ರವನ್ನು ಪರಮಪೂಜ್ಯ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಬಿಡುಗಡೆಗೊಳಿಸಿದರು. ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಶ್ಯಾಮಲಾ ಭಟ್, ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಮುಖ್ಯ ಶಿಕ್ಷಕ ಎನ್. ಕೇಶವ ಪ್ರಕಾಶ್, ಮಂದಿರ ಸಮಿತಿ ಪದಾಧಿಕರಿಗಳು ಉಪಸ್ಥಿತರಿದ್ದರು.


