ನವದೆಹಲಿ (PTI): ಹೋಟೆಲ್ ಗಳಿಂದ ಊಟ, ತಿಂಡಿ-ತಿನಿಸುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಸ್ವಿಗ್ಗಿ ಕಂಪನಿಯು, ತಾನು ತಂದುಕೊಟ್ಟ ಆಹಾರದಲ್ಲಿ ಯಾವುದೇ ಅಸುರಕ್ಷತೆ ಕಂಡುಬಂದಲ್ಲಿ ದೂರು ನೀಡುವ ವ್ಯವಸ್ಥೆಯನ್ನು ಆರಂಭಿಸಿದೆ. ಇದಕ್ಕಾಗಿ ಪ್ರತ್ಯೇಕಸಹಾಯವಾಣಿಯನ್ನು ಪ್ರಾರಂಭಿಸಿದೆ.
ಗ್ರಾಹಕರು ಸಹಾಯವಾಣಿ ಸಂಖ್ಯೆ 7948231850ಗೆ ಕರೆ ಮಾಡಿ ದೂರುಸಲ್ಲಿಸಬಹುದಾಗಿದೆ. ಜೊತೆಗೆ ಸ್ವಿಗ್ಗಿ ಆಯಪ್ನಲ್ಲಿನ ಹೆಲ್ಪ್ ವಿಭಾಗದ (ಆಹಾರ ಸುರಕ್ಷತೆ) ಮೂಲಕವೂ ದೂರು ನೀಡ ಬಹುದಾಗಿದೆ. ಗ್ರಾಹಕರು ಆರ್ಡರ್ಗೆ ಸಂಬಂಧಿಸಿದ ಫೋಟೋಗಳನ್ನು ಒದ ಗಿಸಬೇಕಿದೆ, ತಮ್ಮ ಕಳವಳಕ್ಕೆ ಕಾರಣ ಏನು ಎಂಬುದರ ಕುರಿತು ಚಿಕ್ಕದಾದ ಸಂದೇಶ ವನ್ನು ಬರೆಯಬೇಕಿದೆ. ಸ್ವಿಗ್ಗಿಯ ಆಹಾರ ಸುರಕ್ಷತೆ ತಂಡವು ದೂರನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಕಂಪನಿ ಸೋಮವಾರ ತಿಳಿಸಿದೆ.
ಆಹಾರ ಸುರಕ್ಷತೆಗೆ ಸಂಬಂಧಿಸಿ ದಂತೆ ಮಹಾರಾಷ್ಟ್ರ, ದೆಹಲಿ ಸೇರಿ ದಂತೆ ವಿವಿಧ ರಾಜ್ಯಗಳಲ್ಲಿ ಆಹಾರ ಇಲಾಖೆಯು ತಪಾಸಣೆ ನಡೆಸುತ್ತಿರುವ ಹೊತ್ತಿನಲ್ಲಿ ಸ್ವಿಗ್ಗಿ ಕಂಪನಿಯು ಈ ನಿರ್ಧಾರ ಕೈಗೊಂಡಿದೆ.

