ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶಾಲಾ ಮಟ್ಟದ ಶಾಸ್ತ್ರೋತ್ಸವ ಬುಧವಾರ ಜರಗಿತು. ದೀಪ ಪ್ರಜ್ವಲನೆಯ ಮೂಲಕ ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸುಧಾಕರ ರೈ ಉದ್ಘಾಟಿಸಿದರು. ಮಾತೃ ಮಂಡಳಿಯ ಅಧ್ಯಕ್ಷೆ ಶಾಲಿನಿ, ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಮಧುಸೂದನ, ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ತಂತ್ರಜ್ಞಾನ ಹಾಗೂ ಕಾರ್ಯಾನುಭವ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಒಟ್ಟು 253 ಮಕ್ಕಳು ಶಾಸ್ತ್ರಮೇಳದಲ್ಲಿ ಭಾಗವಹಿಸಿದರು.
ಎಲ್ ಪಿ ವಿಭಾಗದ 75 ಮಕ್ಕಳು, ಯುಪಿ ವಿಭಾಗದಲ್ಲಿ 78 ಮಕ್ಕಳು, ಹೈಸ್ಕೂಲ್ ವಿಭಾಗದಲ್ಲಿ 100 ಮಕ್ಕಳು ಭಾಗವಹಿಸಿದರು. ವಿದ್ಯಾರ್ಥಿಗಳು ತಮ್ಮ ವೈಜ್ಞಾನಿಕ ಜ್ಞಾನ, ಸೃಜನ ಶೀಲತೆ ಮತ್ತು ಪ್ರತಿಭೆಯನ್ನು ಮಾದರಿಗಳು, ಪ್ರಯೋಗಗಳು ಹಾಗೂ ವಿವಿಧ ಉತ್ಪನ್ನಗಳನ್ನು ತಯಾರಿಸುವುದರ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಶಿಕ್ಷಕಿಯರಾದ ಗಾಯತ್ರಿ ಭಟ್ ಸ್ವಾಗತಿಸಿ, ಮೊನೀಶಾ ವಂದಿಸಿದರು. ಶಿಕ್ಷಕಿ ಶುಭ ನಿರೂಪಿಸಿದರು.

.jpg)
