ಕಾಸರಗೋಡು: ಮನೆ ಕೆಲಸದ ಭರವಸೆ ನೀಡಿ, ಕರ್ನಾಟಕ ನಿವಾಸಿಯಾಗಿರುವ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ರಾಜಪುರಂ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಅಂಬಲತ್ತರ ಸನಿಹದ ಇರಿಯ ನಿವಾಸಿ, ಪಾರಮ್ಮಲ್ ಬಶೀರ್ (56) ಬಂಧಿತ. ರಾಜಪುರ ಪೆÇಲೀಸ್ ಠಾಣೆ ಇನ್ಸ್‍ಪೆಕ್ಟರ್ ಎ ಸಂತೋಷ್ ಕುಮಾರ್ ನೇತೃತ್ವದ ಪೆÇಲೀಸರ ತಂಡ ಕಾರ್ಯಾಚರಣೆ ನಡೆಸಿದೆ.
ಪ್ರಕರಣದ ಇನ್ನೋರ್ವ ಆರೋಪಿ ಪೈಸಲ್ ತಲೆಮರೆಸಿಕೊಂಡಿದ್ದಾನೆ. ಕರ್ನಾಟಕ ನಿವಾಸಿಯಾಗಿರುವ ಯುವತಿಯೊಬ್ಬಳಿಗೆ ಮನೆ ಕೆಲಸ ಕೊಡಿಸುವುದಾಗಿ ಆಕೆಯ ತಾಯಿಗೆ ತಿಳಿಸಿ ಆ ಮೂಲಕ ಯುವತಿಯನ್ನು ಅಂಬಲತರಕ್ಕೆ ಕರೆಸಿ ಅಲ್ಲಿನ ಮನೆಯೊಂದರಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಜನವರಿ ತಿಂಗಳಿಂದ ವಿವಿಧ ದಿವಸಗಳಲ್ಲಿ ಆರೋಪಿ ಬಶೀರ್ ಲೈಂಗಿಕ ಕಿರುಕುಳ ನೀಡಿರುವುದಾಗಿ ಯುವತಿ ಪೆÇಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ. ಹೀಗೆ ಲೈಂಗಿಕ ಕಿರುಕುಳ ನೀಡಿದ ನಂತರ ಆರೋಪಿ ನನ್ನನ್ನು ಪಳ್ಳಿಕೆರೆ ನಿವಾಸಿಯೊಬ್ಬನಿಗೆ ಹಸ್ತಾಂತರಿಸಿದ್ದು, ಈತನೂ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಯುವತಿ ಪೆÇಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.


