HEALTH TIPS

ಅಲಿಗಢ: ಶಾಲಾ ಕಟ್ಟಡ ಕುಸಿದು ಬೀಳುತ್ತದೆ ಎಂದು ತರಗತಿ ಬಹಿಷ್ಕರಿಸಿದ ಜೆನ್‌-ಆಲ್ಫಾ

ಅಲಿಗಢ: ಭಮೋರಿ ಖುರ್ದ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡವು ತೀರಾ ಶಿಥಿಲವಾಗಿದ್ದು, ಅದು ಕುಸಿದು ಬೀಳುವ ಸ್ಥಿತಿಯಲ್ಲಿದೆ ಎನ್ನುವ ಕಾರಣಕ್ಕೆ ಅಲ್ಲಿನ ಜೆನ್‌-ಆಲ್ಫಾ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ನಿರಾಕರಿಸಿದ್ದಾರೆ.


ಪ್ರಾಥಮಿಕ ಶಿಕ್ಷಣ ಖಾತೆ ರಾಜ್ಯ ಸಚಿವ ಸಂದೀಪ್ ಸಿಂಗ್ ಅವರು ಪ್ರತಿನಿಧಿಸುವ ಅತ್ರೌಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಶಾಲೆ ಬರುತ್ತದೆ.

ಪ್ರತಿಭಟನೆಯ ವೇಳೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿರುವ ವಿದ್ಯಾರ್ಥಿಗಳು, ಕಟ್ಟಡದ ಮೇಲ್ಛಾಚಣಿಯು ಕುಸಿಯುವ ಹಂತದಲ್ಲಿದೆ ಎಂದು ಆರೋಪಿಸಿದ್ದಾರೆ.

ಶಾಲೆಯ ಮೇಲ್ಛಾಚಣಿಯು ತೀವ್ರ ಹಾನಿಗೊಳಗಾಗಿದೆ. ಕಟ್ಟಡದ ಗೋಡೆಗಳು ಕೂಡ ಶಿಥಿಲಗೊಂಡಿವೆ. ಶಾಲಾ ಆವರಣವು ಪೊದೆಗಳಿಂದ ಆವೃತವಾಗಿದ್ದು, ಆಗಾಗ ಹಾವುಗಳು ಕಾಣಿಸಿಕೊಳ್ಳುತ್ತಿವೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಾಲಾ ಶಿಕ್ಷಕರೊಬ್ಬರು, 'ನಾವು ಕಟ್ಟಡ ಸ್ಥಿತಿಯ ಕುರಿತು ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದೇವೆ. ಆದರೆ, ಯಾವುದೇ ಉತ್ತರ ಬಂದಿಲ್ಲ' ಎಂದು ಹೇಳಿದ್ದಾರೆ.

ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಲಖನೌ, ಫತೇಪುರ, ಹಮೀರ್ಪುರ, ಕನ್ನೌಜ್ ಸೇರಿದಂತೆ ಹಲವು ಕಡೆಗಳಲ್ಲಿ ಜೆನ್‌-ಆಲ್ಫಾ ವಿದ್ಯಾರ್ಥಿಗಳು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries