HEALTH TIPS

ಅಮೆರಿಕ ನೆಲೆ, ಹಡಗುಗಳ ಮೇಲೆ ಇರಾನ್‌ ದಾಳಿ

ಟೆಹರಾನ್ (AFP): ಇರಾನ್‌ನ ಐದು ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತೀಕಾರವಾಗಿ ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕದ ನೆಲೆಗಳು ಮತ್ತು ಅದರ ಕೆಲ ಹಡಗುಗಳನ್ನು ಗುರಿಯಾಗಿಸಿ ದಾಳಿ ಮಾಡಿರುವುದಾಗಿ ಇರಾನ್‌ ಬುಧವಾರ ಹೇಳಿದೆ.


ಹೊರ್ಮುಜ್‌ ಜಲಸಂಧಿ ಮೂಲಕ ಹಾದು ಹೋಗಲು ಯತ್ನಿಸುತ್ತಿದ್ದ ಅಮೆರಿಕದ 20 ಹಡುಗುಗಳ ಮೇಲೆ ದಾಳಿ ನಡೆಸಿರುವುದಾಗಿ ಇರಾನ್‌ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕೋರ್‌ (ಐಆರ್‌ಜಿಸಿ) ಹೇಳಿದೆ. 

ಅಲ್ಲದೆ, 'ಜೋರ್ಡಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯನ್ನು ಧ್ವಂಸಗೊಳಿಸಿದ್ದೇವೆ' ಎಂದೂ ಅದು ಪ್ರತಿಪಾದಿಸಿದೆ.

ಅಷ್ಟೇ ಅಲ್ಲದೆ ಅಮೆರಿಕದ ಮಿತ್ರ ರಾಷ್ಟ್ರಗಳಾದ ಕುವೈತ್‌ ಮತ್ತು ಬಹರೇನ್‌ನ ತೈಲ ಟ್ಯಾಂಕರ್‌ಗಳನ್ನು ಗುರಿಯಾಗಿಸುವುದಾಗಿಯೂ ಅದು ಎಚ್ಚರಿಸಿದೆ.

ಜೋರ್ಡಾನ್‌ನಲ್ಲಿರುವ ಅಮೆರಿಕದ ವಾಯುನೆಲೆ ಮೇಲೆ ಇರಾನ್‌ ಪಡೆಗಳು ಕ್ಷಿಪಣಿ ದಾಳಿ ನಡೆಸಿವೆ. ಇದರಿಂದ ಫೈಟರ್‌ ಜೆಟ್‌ಗಳ ಆಶ್ರಯ ತಾಣಗಳಿಗೆ ಹಾನಿಯಾಗಿದೆ ಎಂದು ಜೋರ್ಡಾನ್‌ನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಇರಾನ್‌ ಕಡೆಯಿಂದ ಬಂದ 18 ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದಾಗಿ ಜೋರ್ಡಾನ್‌ ಸೇನೆ ತಿಳಿಸಿದೆ.

ಅಮೆರಿಕ ಎಚ್ಚರಿಕೆ: 'ಅಮೆರಿಕದ ಹಡಗುಗಳ ಮೇಲೆ ಇರಾನ್‌ ದಾಳಿಗೆ ಯತ್ನಿಸಿದಾಗೆಲ್ಲ, ಅದು ತನ್ನ ಟ್ಯಾಂಕರ್‌ಗಳನ್ನೇ ಕಳೆದುಕೊಳ್ಳುತ್ತದೆ. ಅದನ್ನು ಇಂದು ಸಹ ನೀವು ನೋಡುತ್ತೀರಿ ಎಂದು ನಾನು ಭಾವಿಸುತ್ತೇನೆ' ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಎಚ್ಚರಿಸಿದ್ದಾರೆ.

'ಇರಾನ್‌ನ ತೈಲ ಟ್ಯಾಂಕರ್‌ಗಳನ್ನು ಅಮೆರಿಕ ಗುರಿಯಾಗಿಸಿದರೆ, ಈ ಪ್ರದೇಶದ ಬಳಿಯಿರುವ ಅಮೆರಿಕ ನೆಲೆಗಳನ್ನು ಧ್ವಂಸಗೊಳಿಸುತ್ಥೇವೆ' ಎಂದು ಇರಾನ್‌ ಸೇನೆ ಪುನರುಚ್ಚರಿಸಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries