HEALTH TIPS

ವೇತನ ಪರಿಷ್ಕರಣೆ: ವಿಶ್ವದಲ್ಲೇ ಅತಿಹೆಚ್ಚು ಸಂಬಳ ಪಡೆಯುವ ಸಿಂಗಪುರ ಪ್ರಧಾನಿ ವಾಂಗ್

ಸಿಂಗಪುರ: ವಿಶ್ವದಲ್ಲೇ ಅತ್ಯಂತ ಹೆಚ್ಚು ವೇತನ ಪಡೆಯುವ ನಾಯಕರೆನಿಸಿಕೊಂಡಿರುವ ಸಿಂಗಪುರದ ಪ್ರಧಾನಿ ಮತ್ತು ಸಚಿವರ ವೇತನವನ್ನು ಶೇ 60ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ.


ಮಂಗಳವಾರ ಸಂಸತ್ತಿನಲ್ಲಿ ಈ ವಿಷಯವನ್ನು ತಿಳಿಸಿದ ಪ್ರಧಾನಿ ಲಾರೆನ್ಸ್‌ ವಾಂಗ್‌ , ತಮ್ಮ ಸಚಿವರ ವೇತನ ಶ್ರೇಣಿಯನ್ನು ಪರಿಷ್ಕರಿಸಲಾಗುತ್ತಿದೆ ಎಂದಿದ್ದಾರೆ. 

ವೇತನ ಪರಿಷ್ಕರಣೆಯಿಂದಾಗಿ ಪ್ರಧಾನಿ ಲಾರೆನ್ಸ್ ವಾಂಗ್ ಅವರ ವಾರ್ಷಿಕ ಸಂಬಳ 2.2 ಮಿಲಿಯನ್ ಸಿಂಗಪುರ ಡಾಲರ್‌ನಿಂದ (ಸುಮಾರು ₹14.1 ಕೋಟಿ) ಬರೋಬ್ಬರಿ 3.6 ಮಿಲಿಯನ್ ಸಿಂಗಪುರ ಡಾಲರ್‌ಗೆ (ಸುಮಾರು ₹23.1 ಕೋಟಿ) ಏರಿಕೆಯಾಗಲಿದೆ. ಅಂದರೆ, ಅವರ ವೇತನ ಒಂದೇ ಬಾರಿಗೆ ಸುಮಾರು ₹8.3 ಕೋಟಿಯಷ್ಟು ಹೆಚ್ಚಾಗಲಿದೆ.

ವೇತನ ಏರಿಕೆಗೆ ವ್ಯಕ್ತವಾದ ಆಕ್ಷೇಪಗಳಿಗೆ ಸ್ಪಷ್ಟನೆ ನೀಡಿದ ವಾಂಗ್, ತಮಗೆ ಹೆಚ್ಚಿಸಲಾದ ಸಂಪೂರ್ಣ ಹಣವನ್ನು ಅರ್ಹ ಸಾಮಾಜಿಕ ಹಾಗೂ ಒಳ್ಳೆಯ ಕಾರ್ಯಗಳಿಗೆ ದೇಣಿಗೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.

ಸಚಿವರ ವೇತನವೂ ಭಾರಿ ಏರಿಕೆ:

ಉಪ ಪ್ರಧಾನಿ: ವಾರ್ಷಿಕ ವೇತನ 1.87 ಮಿಲಿಯನ್‌ನಿಂದ 3.06 ಮಿಲಿಯನ್ ಸಿಂಗಪುರ ಡಾಲರ್‌ಗೆ (ಸುಮಾರು ₹19.6 ಕೋಟಿ) ಏರಿಕೆ.

ಕ್ಯಾಬಿನೆಟ್ ಸಚಿವರು: ಹಿರಿತನ ಮತ್ತು ಸಚಿವ ಸಂಪುಟದ ಜವಾಬ್ದಾರಿಗೆ ಅನುಗುಣವಾಗಿ ವಾರ್ಷಿಕ 1.80 ಮಿಲಿಯನ್‌ನಿಂದ 2.88 ಮಿಲಿಯನ್ ಸಿಂಗಪುರ ಡಾಲರ್‌ವರೆಗೆ (ಸುಮಾರು ₹11.5 ಕೋಟಿಯಿಂದ ₹18.5 ಕೋಟಿ) ವೇತನ ಪಡೆಯಲಿದ್ದಾರೆ.

ರಾಜಕೀಯದತ್ತ ಆಕರ್ಷಿಸಲು ವೇತನ ಏರಿಕೆ?:

ಅಮೆರಿಕ ಹಾಗೂ ಜಿ7 (G7) ಒಕ್ಕೂಟದ ಜಾಗತಿಕ ನಾಯಕರ ವೇತನಕ್ಕೆ ಹೋಲಿಸಿದರೆ ಸಿಂಗಪುರ ಪ್ರಧಾನಿಯ ವೇತನ ಮೊದಲಿನಿಂದಲೂ ಹೆಚ್ಚೇ ಇದೆ. ದೇಶದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು, ದಕ್ಷ ಸಚಿವರನ್ನು ಹಾಗೂ ಉತ್ತಮ ಪ್ರತಿಭೆಗಳನ್ನು ರಾಜಕೀಯಕ್ಕೆ ಆಕರ್ಷಿಸಲು ಈ ಭಾರಿ ವೇತನ ನೀಡುವುದನ್ನು ಸಿಂಗಪುರ ಸರ್ಕಾರ ಸಮರ್ಥಿಸಿಕೊಂಡಿದೆ.

'ಇದು ಸೂಕ್ಷ್ಮ ವಿಷಯ ಎಂಬುದು ನಮಗೆ ತಿಳಿದಿದೆ. ಸಾರ್ವಜನಿಕರ ಗಳಿಕೆಗೆ ಹೋಲಿಸಿದರೆ ಇದು ದೊಡ್ಡ ಮೊತ್ತ. ಆದರೆ, ಮುಂಬರುವ ದಶಕಗಳಲ್ಲಿ ದೇಶವನ್ನು ಮುನ್ನಡೆಸಲು ನಮಗೆ ಅತ್ಯುತ್ತಮ ಮತ್ತು ದಕ್ಷ ನಾಯಕತ್ವದ ಅಗತ್ಯವಿದೆ. ದಕ್ಷ ಆಡಳಿತವು ಸೂಕ್ತ ನಾಯಕತ್ವದ ಮೇಲೆಯೇ ನಿಂತಿರುತ್ತದೆ' ಎಂದು ವಾಂಗ್ ಸಮರ್ಥಿಸಿಕೊಂಡಿದ್ದಾರೆ.

ಸಿಂಗಪುರ ಸರ್ಕಾರವು ಸಚಿವರ ವೇತನವನ್ನು ಕೊನೆಯದಾಗಿ 15 ವರ್ಷಗಳ ಹಿಂದೆ ಪರಿಷ್ಕರಿಸಿತ್ತು. ಸ್ವತಂತ್ರ ಸಮಿತಿಯ ಶಿಫಾರಸಿನ ಮೇರೆಗೆ ಈ ವೇತನ ಹೆಚ್ಚಳ ಮಾಡಲಾಗುತ್ತಿದ್ದು, ಅಕ್ಟೋಬರ್ 15ರಿಂದ ಸಚಿವರ ಕಾರ್ಯಕ್ಷಮತೆಗೆ ಅನುಗುಣವಾಗಿ ಹಂತ-ಹಂತವಾಗಿ ಜಾರಿಗೆ ಬರಲಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries