HEALTH TIPS

ಕೃಷ್ಣಕಥಾ ಸಾಗರದಲ್ಲಿ ತೇಲಾಡಿದ ಗೋಕುಲಂ ಗೋಶಾಲೆ

ಕಾಸರಗೋಡು: ಬೇಕಲ ಗೋಕುಲಂ ಗೋಶಾಲೆಯಲ್ಲಿ ಎರಡು ದಿನಗಳ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಶ್ರದ್ಧಾಭಕ್ತಿಯಿಂದ ಆರಂಭವಾಗಿಯಿತು. ಗೋವುಗಳೂ ಶ್ರೋತೃಗಳಾಗಿರುವ ಏಕೈಕ ವೇದಿಕೆ ಎಂದು ಪ್ರಸಿದ್ಧಿಯಾಗಿರುವ ಗೋಕುಲಂ ಗೋಶಾಲೆಯಲ್ಲಿ ನೂರಕ್ಕೂ ಹೆಚ್ಚು ಕಲಾವಿದರು ಎರಡು ದಿನಗಳ ಕಾಲ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. 


ಗುರುವಾರ ಬೆಂಗಳೂರಿನ ನೃತ್ಯ ನೂಪುರ ಕಲಾಶಾಲೆಯ ಇಪ್ಪತ್ತಕ್ಕೂ ಹೆಚ್ಚು ಮಕ್ಕಳು ರಾಧೆಯರಾಗಿ ಕೃಷ್ಣನಾಗಿಯೂ ಗೋಪಿಕೆಯರಾಗಿಯೂ ಪ್ರೇಕ್ಷಕರ ಮನಸ್ಸನ್ನು ಭಕ್ತಿಯಲ್ಲಿ ತೇಲಿಸಿದರು. ವಯನಾಡ್ ಡಾನ್ಸ್ ಟೀಚರ್ಸ್ ಅಸೋಸಿಯೇಷನ್ ತಂಡದ ನೃತ್ಯಶಿಲ್ಪವೂ ಹೆಚ್ಚು ಗಮನ ಸೆಳೆಯಿತು. ನೃತ್ಯ ವರ್ಣ ಕಲಾ ಸೌರಭ ಮೈಸೂರಿನ ಕಲ್ಪಿತಾ ರಾವ್ ಮತ್ತು ಶಿಷ್ಯರು ಪ್ರಸ್ತುತಪಡಿಸಿದ ಭರತನಾಟ್ಯ ನೃತ್ಯಶಿಲ್ಪದಲ್ಲಿ ನವರಸ ರಾಮಾಯಣ ಹೆಚ್ಚು ಗಮನ ಸೆಳೆಯಿತು. ಪ್ರಸಿದ್ಧ ಕೊಳಲುವಾದಕ ಡಾ. ವಿಜಯ್ ಗೋಪಾಲ್ ಚೆನ್ನೈ ಅವರ ಪುಲ್ಲಾಂಗುಳಲ್ ಕಚೇರಿ ಶ್ರೀಕೃಷ್ಣ ಜಯಂತಿ ಆಚರಣೆಗೆ ಮೆರುಗು ನೀಡಿತು. ಮಾಂಜೂರ್ ರಂಜಿತ್ ಪಿಟೀಲಿನಲ್ಲಿಯೂ ನಾಂಜಿಲ್ ಅರುಳ್ ಮೃದಂಗದಲ್ಲಿಯೂ ಶ್ರೀಜಿತ್ ವೆಳ್ಳಾಟ್ಟಂಜೂರ್ ಘಟಂನಲ್ಲಿಯೂ ಪಕ್ಕವಾದ್ಯ ಒದಗಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries