HEALTH TIPS

ಆಯುರ್ವೇದ ದಿನಾಚರಣೆ ಅಂಗವಾಗಿ ಔಷಧೀಯ ತೋಟ ನವೀಕರಣ

ಕಾಸರಗೋಡು: ಆಯುರ್ವೇದ ದಿನಾಚರಣೆಯ ಅಂಗವಾಗಿ ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಔಷಧೀಯ ತೋಟವನ್ನು ನವೀಕರಿಸಲಾಯಿತು. ಔಷಧೀಯ ಸಸ್ಯಗಳ ಕುರಿತು ಹಾಗೂ ಅವುಗಳ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಚಿನ್ಮಯ ವಿದ್ಯಾಲಯದ ಸೀಡ್ ಕ್ಲಬ್ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು.


ಕಾರ್ಯಕ್ರಮದ ಅಂಗವಾಗಿ ವಿವಿಧ ಔಷಧೀಯ ಸಸ್ಯಗಳ ಹೆಸರುಗಳು, ಔಷಧೀಯ ಗುಣಗಳು ಹಾಗೂ ಅವುಗಳ ಉಪಯೋಗಗಳ ಕುರಿತು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ಶಿಕ್ಷಕರು ಹಾಗೂವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಪ್ರಾಂಶುಪಾಲ ಟಿ.ವಿ. ಸುಕುಮಾರನ್, ಉಪ ಪ್ರಾಂಶುಪಾಲ ಅಭಿಜಿತ್. ಕೆ., ಮುಖ್ಯೋಪಾಧ್ಯಾಯಿನಿ ಎಸ್. ಆರ್. ಪೂರ್ಣಿಮಾ, ಸೀಡ್ಸ್ ಸಂಯೋಜಕ ಕೆ.ಎಂ.ಮನೋಜ್ ಕುಮಾರ್, ಶ್ರುತಿ, ಅಕ್ಷತಾ ಹಾಗೂ ಸೀಡ್ಸ್ ಕ್ಲಬ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries