HEALTH TIPS

ಮಾಲ್‌ವೇರ್ ಹಗರಣ; ಭಾರತದ ಎಚ್ಚರಿಕೆ ಬೆನ್ನಲ್ಲೇ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಜಾಹೀರಾತುಗಳನ್ನು ತೆಗೆದುಹಾಕಿದ ಮೆಟಾ

ನವದೆಹಲಿ: ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ಜಾಹೀರಾತುಗಳು ಲೈಂಗಿಕವಾಗಿ ಅಶ್ಲೀಲವೆನಿಸುವ ವಿಷಯಗಳನ್ನು ಬಳಸಿಕೊಂಡು ಬಳಕೆದಾರರನ್ನು ಆಕರ್ಷಿಸಿ, ಮಾಲ್‌ವೇರ್ ಡೌನ್‌ಲೋಡ್ ಆಗುವಂತೆ ಮಾಡುತ್ತಿವೆ ಎಂದು ಸರ್ಕಾರ ಫ್ಲ್ಯಾಗ್ ಮಾಡಿದ ನಂತರ ಮೆಟಾ ಡಝನ್‌ ಗಟ್ಟಲೆ ಜಾಹೀರಾತುಗಳನ್ನು ತೆಗೆದುಹಾಕಿದೆ.

ಮೆಟಾ ಸೋಮವಾರ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನಿಂದ ಡಝನ್‌ ಗಟ್ಟಲೆ ಜಾಹೀರಾತುಗಳನ್ನು ತೆಗೆದುಹಾಕಿದೆ. ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ಜಾಹೀರಾತುಗಳು ಲೈಂಗಿಕವಾಗಿ ಅಶ್ಲೀಲವೆನಿಸುವ ವಿಷಯಗಳನ್ನು ಬಳಸಿಕೊಂಡು ಬಳಕೆದಾರರನ್ನು ಆಕರ್ಷಿಸಿ, ಬ್ಯಾಂಕಿಂಗ್ ರುಜುವಾತುಗಳನ್ನು ಕದಿಯುವ ಮತ್ತು ಬ್ಯಾಂಕ್ ಖಾತೆಗಳನ್ನು ಬರಿದಾಗಿಸುವ ಮಾಲ್‌ವೇರ್ ಡೌನ್‌ಲೋಡ್ ಆಗುವಂತೆ ಮಾಡುತ್ತಿವೆ ಎಂದು ಮಾದರಿಯನ್ನು ಸರ್ಕಾರ ಫ್ಲ್ಯಾಗ್ ಮಾಡಿದ ನಂತರ ಈ ಬೆಳವಣಿಗೆ ನಡೆದಿದೆ.

ವಂಚಕ ಆಪರೇಟರ್‌ ಗಳು ದೇಶದ ಡಿಜಿಟಲ್ ಪಾವತಿಗಳ ಏರಿಕೆಯನ್ನು ಗುರಿಯಾಗಿಸಿಕೊಂಡಿರುವ ಕಾರಣ, ಸರ್ಕಾರಿ ದತ್ತಾಂಶಗಳ ಪ್ರಕಾರ 2025ರಲ್ಲಿ ಭಾರತದಲ್ಲಿ ಸುಮಾರು 2.4 ಶತಕೋಟಿ ಡಾಲರ್‌ಗಳಷ್ಟು ಸೈಬರ್‌ ವಂಚನೆ ನಷ್ಟ ದಾಖಲಾಗಿದೆ.

"Night Play" ಮತ್ತು "Kyss" ಮೊದಲಾದ ಹೆಸರುಗಳಲ್ಲಿ ಕಾರ್ಯನಿರ್ವಹಿಸುವ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ನ ಜಾಹೀರಾತುಗಳು ಜನರನ್ನು ಫಿಶಿಂಗ್ ವೆಬ್‌ಸೈಟ್‌ ಗಳಿಗೆ ಕರೆದೊಯ್ಯುತ್ತಿದೆ. "ಅಶ್ಲೀಲ ಅಪ್ಲಿಕೇಶನ್‌ ಗಳಂತೆ ಕಪಟ ರೂಪದಲ್ಲಿ" ದುರುದ್ದೇಶಪೂರಿತ ಆಂಡ್ರಾಯ್ಡ್‌ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ನಡೆಯುತ್ತಿರುವ ಹಣಕಾಸಿನ ವಂಚನೆಯಲ್ಲಿ ಹೆಚ್ಚಳವನ್ನು ಗಮನಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಸೋಮವಾರ ಸರ್ಕಾರಿ ಸೂಚನೆ ನೀಡಿದ ನಂತರವೂ ಕನಿಷ್ಠ 39 ಅಂತಹ ಜಾಹೀರಾತುಗಳು ಇನ್ನೂ ಸಕ್ರಿಯವಾಗಿರುವುದಾಗಿ ರಾಯಿಟರ್ಸ್‌ ವರದಿ ಮಾಡಿದೆ. ಆದರೆ, ನಂತರ ಮೆಟಾ ಅಂತಹ ಎಲ್ಲಾ ಜಾಹೀರಾತುಗಳನ್ನು ತೆಗೆದುಹಾಕಿರುವುದಾಗಿ ವರದಿ ತಿಳಿಸಿದೆ.

ಅಮೆರಿಕದ ಕಂಪೆನಿಯ ಜಾಹೀರಾತು ನಿಯಮಗಳಲ್ಲಿ ವಯಸ್ಕ ನಗ್ನತೆ ಮತ್ತು ಲೈಂಗಿಕ ಚಟುವಟಿಕೆಯನ್ನು ಹೊಂದಿರಬಾರದು ಎಂದು ಹೇಳಲಾಗಿದೆ. ಮಾತ್ರವಲ್ಲದೆ, ಬಳಕೆದಾರರಿಗೆ ಹಣದಿಂದ ವಂಚಿಸುವ ಉದ್ದೇಶ ಹೊಂದಿರುವ ಜಾಹೀರಾತುಗಳೂ ಸೇರಿದಂತೆ, "ಗುರುತಿಸಲಾದ ವಂಚಿಸುವ ಅಥವಾ ದಾರಿತಪ್ಪಿಸುವ ಉದ್ದೇಶಗಳಿಂದ ಬಳಸುವ ಉತ್ಪನ್ನಗಳು, ಸೇವೆಗಳು, ಯೋಜನೆಗಳು ಅಥವಾ ಕೊಡುಗೆಗಳಿಗಾಗಿ" ಜಾಹೀರಾತುಗಳನ್ನೂ ನಿಷೇಧಿಸಲಾಗಿದೆ.

ಪ್ರಮುಖ ತಂತ್ರಜ್ಞಾನ ವೇದಿಕೆಗಳಲ್ಲಿ ಆರ್ಥಿಕ ವಂಚನೆಯ ಬಗ್ಗೆ ಭಾರತ ಇತ್ತೀಚಿನ ತಿಂಗಳಲ್ಲಿ ಇದೀಗ ಎರಡನೇ ಬಾರಿ ಕಳವಳ ವ್ಯಕ್ತಪಡಿಸಿದೆ. ಈ ಹಿಂದೆ, ಪ್ರಮುಖ ಬ್ಯಾಂಕ್‌ ಗಳಂತೆ ವರ್ತಿಸಲು ಅಪರಾಧಿಗಳು ಗೂಗಲ್‌ ಅನ್ನು ಬಳಸುತ್ತಿದ್ದಾರೆ ಎಂದು ಕಂಡುಹಿಡಿದ ನಂತರ, ಸರ್ಕಾರವು ಅದರ ಫೈರ್‌ಬೇಸ್‌ ವೇದಿಕೆಯಲ್ಲಿರುವ ನೂರಾರು ಖಾತೆಗಳನ್ನು ಸ್ಥಗಿತಗೊಳಿಸುವಂತೆ ನಿರ್ದೇಶಿಸಿತ್ತು.

ಮೆಟಾ ಆಂತರಿಕವಾಗಿ ಹಗರಣ ಮತ್ತು ನಿಷೇಧಿತ ಸರಕುಗಳ ಜಾಹೀರಾತುಗಳು 2024ರ ಆದಾಯದ ಶೇ 10ರಷ್ಟನ್ನು, ಅಂದರೆ ಸುಮಾರು 16 ಶತಕೋಟಿ ಡಾಲರ್‌ ಗಳನ್ನು ತಂದಿವೆ ಎಂಬುದನ್ನು ಗುರುತಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries