ಕುಂಬಳೆ: ಸೀತಾಂಗೋಳಿ ಸನಿಹದ ಎಕೆಜಿ ನಗರದಲ್ಲಿರುವ ಸರ್ಕಾರಿ ಐಟಿಐಯಲ್ಲಿ, ಸೇವಾ ಭಾರತಿ ಪುತ್ತಿಗೆ ಪಂಚಾಯಿತಿ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗಾಗಿ ಮಾದಕ ವಸ್ತು ವಿರುದ್ಧ ಜಾಗೃತಿ ಶಿಬಿರ ಆಯೋಜಿಸಲಾಯಿತು.ಮಕ್ಕಳಲ್ಲಿ ಮಾದಕ ಪದಾರ್ಥಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವುದು, ಇವುಗಳಿಂದ ದೂರವಿದ್ದು ಆರೋಗ್ಯಕರ ಹಾಗೂ ಸುರಕ್ಷಿತ ಜೀವನದತ್ತ ಮಕ್ಕಳನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ಕುಂಬಳೆ ರೇಂಜ್‍ನ ಅಬಕಾರಿ ಅಧಿಕಾರಿ ಕಣ್ಣನ್ ಕುಂಞ ಅವರು ವಿವಿಧ ಮಾದಕ ದ್ರವ್ಯಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳು ಮತ್ತು ಅನಾಹುತಗಳ ಕುರಿತು ಮಕ್ಕಳಿಗೆ ಮಾಹಿತಿ ಹಾಗೂ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಸೀತಾಂಗೋಳಿ ಸರ್ಕಾರಿ ಐಟಿಐ ಸೀತಾಂಗೋಳಿಯ ಪ್ರಭಾರ ಪ್ರಾಂಶುಪಾಲೆ ಹಝಲ್ ಬಿಂದು ಕೆ.ಜೆ, ಸೇವಾ ಭಾರತಿ ಪುತ್ತಿಗೆ ಯೂನಿಟ್‍ನ ಅಧ್ಯಕ್ಷ ದಾಮೋದರನ್. ಡಿ ಹಾಗೂ ಯೂನಿಟ್‍ನ ಸಮಿತಿ ಪದಾಧಿಕಾರಿಗಳಾದ ಉಮಾಲತಾ, ಅಪ್ಪಣ್ಣ, ಮನೋಜ್ ಕುಮಾರ್, ಲೋಹಿತ್, ಪ್ರಸನ್ನ ಕುಮಾರ್, ಶಾಲಿನಿ ಮತ್ತು ದಿವ್ಯಾ ಉಪಸ್ಥಿತರಿದ್ದರು.
ದಾಮೋದರನ್ ಸ್ವಾಗತಿಸಿದರು. ಯೂನಿಟ್ ಕೋಶಾಧಿಕಾರಿ ಅಪ್ಪಣ್ಣ ಕಾರ್ಯಕ್ರಮ ನಿರೂಪಿಸಿದರು. ಯೂನಿಟ್ ಕಾರ್ಯದರ್ಶಿ ಉಮಾಲತಾ ವಂದಿಸಿದರು.



