HEALTH TIPS

ಇದು ಹತ್ಯಾಕಾಂಡವೇ ಸರಿ...: ಔಷಧ ದರಗಳ ವ್ಯತ್ಯಾಸದ ಬಗ್ಗೆ ಸುಪ್ರೀಂ ಕೋರ್ಟ್ ಕಿಡಿ

ನವದೆಹಲಿ: ಔಷಧಗಳ ನಿಗದಿತ ಚಿಲ್ಲರೆ ಬೆಲೆ ಮತ್ತು ಅವುಗಳ ನೈಜ ಖರೀದಿ ವೆಚ್ಚದ ನಡುವಿನ ಅಗಾಧ ಅಂತರದ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಕಳವಳ ವ್ಯಕ್ತಪಡಿಸಿದೆ.


ಪಾರದರ್ಶಕವಿಲ್ಲದ ಮತ್ತು ಗಗನಕ್ಕೇರುತ್ತಿರುವ ಔಷಧಗಳ ಬೆಲೆಗಳು ಸಾಮಾನ್ಯ ರೋಗಿಗಳಿಗೆ ತೀವ್ರ ಸಂಕಷ್ಟ ತಂದೊಡ್ಡುತ್ತಿದ್ದರೆ, ಖಾಸಗಿ ಆಸ್ಪತ್ರೆಗಳು ಮತ್ತು ಇತರ ಮಧ್ಯವರ್ತಿಗಳು ಲಾಭದ ಹಣವನ್ನು ಜೇಬಿಗಿಳಿಸಿಕೊಳ್ಳುತ್ತಿದ್ದಾರೆ ಎಂದೂ ಕೋರ್ಟ್‌ ಬೇಸರ ಹೊರಹಾಕಿದೆ. 

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ನೇತೃತ್ವದ ಪೀಠವು ಔಷಧಗಳ ಬೆಲೆಗಳ ಮೇಲೆ ಕಠಿಣ ನಿಯಂತ್ರಣ ಜಾರಿಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿತು.

ಔಷಧಗಳ ಬೆಲೆಗಳ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸಿದ್ದಲ್ಲದೆ, ಗರಿಷ್ಠ ಚಿಲ್ಲರೆ ಬೆಲೆಯ (ಎಂಆರ್‌ಪಿ) ಮೇಲೆ ಶೇಕಡ 16ರಷ್ಟು ಲಾಭದ ಮಿತಿಯನ್ನು ಏಕೆ ನಿಗದಿಪಡಿಸಬಾರದು ಎಂದು ನ್ಯಾಯಪೀಠ ಪ್ರಶ್ನಿಸಿತು.

ಉದಾಹರಣೆಗೆ ₹22,437 ಎಂಆರ್‌ಪಿ ಹೊಂದಿರುವ ಇಂಜೆಕ್ಷನ್ ಚಿಲ್ಲರೆ ವ್ಯಾಪಾರಿಗೆ ಕೇವಲ ₹3,520ಕ್ಕೆ ಸಿಗುತ್ತದೆ. ₹27,000 ಎಂಆರ್‌ಪಿ ಹೊಂದಿರುವ ಕ್ಯಾನ್ಸರ್ ಔಷಧದ ಚಿಲ್ಲರೆ ದರ ₹3,000 ಆಗಿದೆ. ಹತ್ತು ಪಟ್ಟು ಹೆಚ್ಚಿರುವ ಈ ಬೃಹತ್ ಪ್ರಮಾಣದ ಹಣ ಎಲ್ಲಿಗೆ ಹೋಗುತ್ತದೆ ಎಂದು ಪ್ರಶ್ನಿಸಿದ ನ್ಯಾಯಮೂರ್ತಿ ಮೆಹ್ತಾ, 'ಇದು ಒಂದು ರೀತಿಯ ಹತ್ಯಾಕಾಂಡವೇ ಸರಿ' ಎಂದು ಕಿಡಿಕಾರಿದ್ದಾರೆ.

ರೋಗಿಗಳನ್ನು ಆಸ್ಪತ್ರೆಯ ಆವರಣದಲ್ಲಿರುವ ಔಷಧಾಲಯಗಳಿಂದಲೇ ಕಡ್ಡಾಯವಾಗಿ ಔಷಧಗಳನ್ನು ಖರೀದಿಸುವಂತೆ ಮಾಡಬೇಕು. ಅದೇ ಔಷಧವನ್ನು ಹೊರಗಿನಿಂದ ಕಡಿಮೆ ಬೆಲೆಗೆ ಖರೀದಿಸಲು ಪ್ರಯತ್ನಿಸುವವರು ಅದರ ಗುಣಮಟ್ಟ ಅಥವಾ ಅಸಲಿಯತ್ತಿನ ಬಗ್ಗೆ ಅನುಮಾನ ಎದುರಿಸಬೇಕಾಗಬಹುದು ಅಥವಾ ಆಸ್ಪತ್ರೆಯಿಂದಲೇ ವಿರೋಧವನ್ನು ಎದುರಿಸಬೇಕಾಗಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಖಾಸಗಿ ಆಸ್ಪತ್ರೆಯವರು ನೀವು ನಮ್ಮ ಔಷಧಾಲಯದಿಂದಲೇ ಔಷಧ ಖರೀದಿಸಬೇಕು. ಹೊರಗಿನಿಂದ ಔಷಧಗಳನ್ನು ತಂದರೆ ನಾವು ಚಿಕಿತ್ಸೆಯ ಭರವಸೆ ನೀಡುವುದಿಲ್ಲ ಎಂದು ಹೇಳಿದರೆ, ರೋಗಿ ಏನು ಮಾಡಬೇಕು ಎಂದು ಪ್ರಶ್ನಿಸಿದ ಮೆಹ್ತಾ, ಖಾಸಗಿ ಆಸ್ಪತ್ರೆಗಳು ಮೃತದೇಹವನ್ನು ಹೊರಗೆ ಕೊಂಡೊಯ್ಯಲು ಕೂಡ ಬಿಡುವುದಿಲ್ಲ ಎಂದಿದ್ದಾರೆ.

ವೈದ್ಯಕೀಯ ಉಪಕರಣಗಳು ಮತ್ತು ಔಷಧಗಳು ಅಗತ್ಯ ಸರಕುಗಳ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ. ಅವುಗಳನ್ನು ಏಕೆ ಬೆಲೆ ನಿಯಂತ್ರಣದ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ನ್ಯಾಯಪೀಠವು ಪ್ರಶ್ನಿಸಿದೆ.

ವಿಚಾರಣೆ ವೇಳೆ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೇಂದ್ರ ಸರ್ಕಾರವು ಸಮತೋಲಿತ ಪರಿಹಾರದ ಕುರಿತು ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು. ಅಲ್ಲದೆ, ಏಕರೂಪದ ಶೇ 16ರಷ್ಟು ಗರಿಷ್ಠ ಲಾಭ ಮಿತಿಯನ್ನು ವಿಧಿಸುವ ನ್ಯಾಯಾಲಯದ ಸಲಹೆಯು ತಾರ್ಕಿಕವಾಗಿದೆ ಎಂದು ಹೇಳಿದ್ದಾರೆ.

ಎಲ್ಲಾ ಔಷಧಗಳಿಗೂ ಡಿಪಿಸಿಒ ಅಡಿಯಲ್ಲಿ ನಿಗದಿಪಡಿಸಿದಂತೆ ಎಂಆರ್‌ಪಿ ಮೇಲೆ ಶೇಕಡ 16ರಷ್ಟು ಲಾಭದ ಮಿತಿಯನ್ನು ಏಕೆ ಇಟ್ಟುಕೊಳ್ಳಬಾರದು?, ಏಕೆ ಸಾಧ್ಯವಿಲ್ಲ?, ಅಂತಿಮವಾಗಿ, ತೆರಿಗೆ ಪಾವತಿದಾರರೇ ಹಣವನ್ನು ಭರಿಸಬೇಕಾಗುತ್ತದೆ ಎಂದು ಮೆಹ್ತಾ ಹೇಳಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries