ಕುಂಬಳೆ: ಕುಂಬಳೆ ಕೃಷ್ಣನಗರ ನಿವಾಸಿ, ನಿವೃತ್ತ ಶಿಕ್ಷಕ ಟಿ.ಜೆ ಥಾಮಸ್ ಹಾಗೂ ಹೋಲಿ ಫ್ಯಾಮಿಲಿ ಶಾಲಾ ಮುಖ್ಯ ಶಿಕ್ಷಕಿ ಸೋಫಿಯಮ್ಮ ಅವರ ಮನೆ ಬಾಗಿಲು ಒಡೆದು ನುಗ್ಗಿದ ಕಳ್ಳರು ಒಂದೂಕಾಲು ಪವನು ಚಿನ್ನಾಭರಣ ಕಳವುಗೈದಿದ್ದಾರೆ.
ದಂಪತಿ ಓಣಂ ರಜೆ ಹಿನ್ನೆಲೆಯಲ್ಲಿ ತಳಿಪರಂಬದ ಆಲಕ್ಕೋಡ್ನಲ್ಲಿರುವ ತಮ್ಮ ಮನೆಗೆ ಆ. 22ರಂದು ತೆರಳಿದ್ದು, ಸೋಮವಾರ ಬೆಳಗ್ಗೆ ಮನೆಗೆ ವಾಪಸಾದಾಗ ಬಾಗಿಲು ಒಡೆದ ಸ್ಥಿತಿಯಲ್ಲಿದ್ದು, ಮನೆಯೊಳಗೆ ಸಾಮಗ್ರಿ ಚೆಲ್ಲಾಪಿಲ್ಲಿಯಾಗಿರುವುದು ಕಂಡು ಬಂದಿತ್ತು. ತಪಾಸಣೆ ನಡೆಸಿದಾಗ ಕಪಾಟಿನಲ್ಲಿರಿಸಿದ್ದ ಮುಕ್ಕಾಲು ಪವನ್ ಮತ್ತು ಅರ್ಧ ಪವನ್ ತೂಕದ ಎರಡು ಆಭರಣಗಳು ನಾಪತ್ತೆಯಾಗಿದ್ದು, ಇನ್ನೊಂದು ಕಪಾಟಿನಲ್ಲಿದ್ದ ನಗದು ಒಡೆಯಲಾಗದೆ ಹಾಗೇ ಉಳಿದುಕೊಂಡಿತ್ತು.
ಟಿ.ಜೆ ಥಾಮಸ್ ನೀಡಿದ ದೂರಿನನ್ವಯ ಕುಂಬಳೆ ಠಾಣೆ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


