HEALTH TIPS

ಮೊಖಾ ಬಳಿ ಯಮನ್ ಪಡೆಗಳಿಂದ ವೈಮಾನಿಕ ದಾಳಿ: ಹೌದಿಗಳ ಶಸ್ತ್ರಾಸ್ತ್ರ, ವಾಹನ ನಾಶ; ವರದಿ

ಸನಾ: ಯಮನ್‍ನ ಕೆಂಪು ಸಮುದ್ರದ ಕರಾವಳಿಯ ಸಂಪೂರ್ಣ ಕಾರ್ಯತಂತ್ರದ ಹಿಡಿತವನ್ನು ಹೌದಿ ಬಂಡುಕೋರರು ಪಡೆದುಕೊಂಡ ನಂತರ ಅವರ ವಿರುದ್ಧ ಸರಕಾರಿ ಪಡೆಗಳು ವಾಯುದಾಳಿ ನಡೆಸಿರುವುದಾಗಿ ವರದಿಯಾಗಿದೆ.


ಶನಿವಾರದಂದು ದೇಶದ ಹಲವಾರು ರಂಗಗಳಲ್ಲಿ, ಅದರಲ್ಲೂ ಮುಖ್ಯವಾಗಿ ಪಶ್ಚಿಮ ಕರಾವಳಿಯಲ್ಲಿ ತೀವ್ರ ಸೈನಿಕ ಸಂಘರ್ಷ ವರದಿಯಾಗಿದ್ದು, ಸರಕಾರಿ ಪಡೆಗಳು ಈ ಹೋರಾಟವನ್ನು `ಅಸ್ತಿತ್ವಕ್ಕಾಗಿ ನಡೆಯುತ್ತಿರುವ ಯುದ್ಧ' ಎಂದು ಬಣ್ಣಿಸಿವೆ. 

ಮೊಖಾ ನಗರದ ಬಂದರಿನ ಬಳಿ ಇರಾನ್ ಬೆಂಬಲಿತ ಹೌದಿ ಬಂಡುಕೋರರ ವಾಹನಗಳು ಮತ್ತು ಶಸ್ತ್ರಾಸ್ತ್ರಗಳನ್ನು ನಾಶಪಡಿಸಲಾಗಿದೆ ಹಾಗೂ ಅವರ ಸದಸ್ಯರನ್ನು ಹತ್ಯೆ ಮಾಡಲಾಗಿದೆ ಎಂದು ಯಮನ್‍ನ ಸರಕಾರಿ ಪಡೆಗಳ ವಕ್ತಾರರನ್ನು ಉಲ್ಲೇಖಿಸಿ `ಸಬಾ' ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜಾಗತಿಕ ತೈಲ ಸಾರಿಗೆಗೆ ಅತ್ಯಂತ ನಿರ್ಣಾಯಕವಾಗಿರುವ `ಬಾಬ್ ಅಲ್-ಮಂದೇಬ್' ಜಲಸಂಧಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಭಾಗವಾಗಿ, ಹೌದಿಗಳು ಗುರುವಾರ ಮೊಖಾ ನಗರವನ್ನು ಹಾಗೂ ಶುಕ್ರವಾರ ಮಯೂನ್ ದ್ವೀಪವನ್ನು ವಶಪಡಿಸಿಕೊಂಡಿದ್ದರು. ಈ ಮಧ್ಯೆ, ಮಧ್ಯಪ್ರಾಚ್ಯದಲ್ಲಿ ಅಮೆರಿಕನ್ ಪಡೆಗಳ ಉಸ್ತುವಾರಿ ವಹಿಸಿರುವ ಅಮೆರಿಕ ಸೆಂಟ್ರಲ್ ಕಮಾಂಡ್‍ನ ಮುಖ್ಯಸ್ಥರು ಯಮನ್‍ನ ಬೆಳವಣಿಗೆಯ ಕುರಿತು ಚರ್ಚಿಸಲು ಈಗ ಸೌದಿ ಅರೇಬಿಯಾದಲ್ಲಿದ್ದಾರೆ ಎಂದು `ಅಲ್ ಜಝೀರಾ' ವರದಿ ಮಾಡಿದೆ.






Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries