HEALTH TIPS

ಪೆರಿಯ ಗೋಶಾಲೆಯ ಪರಂಪರಾ ಪ್ರಶಸ್ತಿಗಳ ಘೋಷಣೆ


ಕಾಸರಗೋಡು
: ಬೇಕಲ ಗೋಕುಲಂ ಗೋಶಾಲೆಯ 2026ರ ಪರಂಪರಾ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಪ್ರಸಿದ್ಧ ಸಂಗೀತಜ್ಞರೂ ಹರಿಕಥಾಕಾರರೂ ಪದ್ಮಭೂಷಣ ಪ್ರಶಸ್ತಿ ವಿಜೇತರೂ ಆದ ಟಿ ಎನ್ ಶೇಷಗೋಪಾಲ್ ಅವರಿಗೆ ಈ ವರ್ಷದ ಪರಂಪರಾ ವಿಭೂಷಣ ಪುರಸ್ಕಾರ ಘೋಷಿಸಲಾಗಿದೆ. 61000 ರೂ. ನಗದು ಮತ್ತು ತಾಮ್ರ ಫಲಕ ಒಳಗೊಂಡಿರುವ ಪ್ರಶಸ್ತಿ ಇದಾಗಿದೆ. ಕೇರಳದ ಅತ್ಯಂತ ಹಿರಿಯ ಪಿಟೀಲು ವಿದ್ವಾಂಸರೂ ಅನೇಕ ಶಿಷ್ಯ ಸಂಪತ್ತಿನ ಒಡೆಯರೂ ಆದ ನೆಡುಮಂಗಾಡ್ ಶಿವಾನಂದನ್ ಅವರು ಪರಂಪರಾ ಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 51000 ರೂ.ನಗದು ಮತ್ತು ತಾಮ್ರ ಫಲಕ ಒಳಗೊಂಡಿರುವ ಪ್ರಶಸ್ತಿ ಇದಾಗಿದೆ. ಬೆಂಗಳೂರಿನ ಪ್ರಸಿದ್ಧ ಮೃದಂಗ ವಿದ್ವಾಂಸ ಆನೂರ್ ಅನಂತಕೃಷ್ಣ ಶರ್ಮಾ ಅವರಿಗೆ 41000 ರೂ.ನಗದು ಮತ್ತು ತಾಮ್ರ ಫಲಕ ಒಳಗೊಂಡಿರುವ ಪರಂಪರಾಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

ಬಿಹಾರದ ಪ್ರಸಿದ್ಧ ಗಾಯಕಿ ಮೈಥಿಲಿ ಠಾಕೂರ್ ಅವರು ಪರಂಪರಾ ಯುವ ಪುರಸ್ಕಾರಕ್ಕೂ, ಪಿಟೀಲಿನಲ್ಲಿ ವಿಸ್ಮಯ ಸೃಷ್ಟಿಸುವ ಗಂಗಾ ಶಶಿಧರನ್ ಬಾಲಪ್ರತಿಭಾ ಪುರಸ್ಕಾರಕ್ಕೂ ಆಯ್ಕೆಯಾಗಿದ್ದಾರೆ. ಇವರಿಬ್ಬರಿಗೂ 25000 ರೂ.ನಗದು ಮತ್ತು ತಾಮ್ರ ಫಲಕ ನೀಡಿ ಗೌರವಿಸಲಾಗುವುದು. ನವೆಂಬರ್ 10 ರಿಂದ 22ರವರೆಗೆ ನಡೆಯಲಿರುವ ದೀಪಾವಳಿ ಸಂಗೀತೋತ್ಸವದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಗೋಶಾಲೆಯ ಸ್ಥಾಪಕ ವಿಷ್ಣುಪ್ರಸಾದ್ ಹೆಬ್ಬಾರ್ ಅವರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries