ಆಲಪ್ಪುಳ: ರಾನ್ನಿಯ ಮಾಜಿ ಶಾಸಕ ಪ್ರಮೋದ್ ನಾರಾಯಣ್ ವಿರುದ್ಧ ಆರ್ಥಿಕ ವಂಚನೆ ಆರೋಪದ ಮೇಲೆ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಆಲಪ್ಪುಳ ಮೂಲದ ನೂರಾಡು ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.
ಖಾಸಗಿ ಸಂಸ್ಥೆಯಲ್ಲಿ ಷೇರುಗಳು ಮತ್ತು ಹೆಚ್ಚಿನ ಲಾಭಾಂಶದ ಭರವಸೆ ನೀಡಿ 25 ಲಕ್ಷ ರೂ. ಠೇವಣಿ ಇಡುವ ಮೂಲಕ ವಂಚಿಸಿದ್ದಾರೆ ಎಂಬ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಪ್ರಮೋದ್ ನಾರಾಯಣ್ ಎರಡನೇ ಆರೋಪಿ. ವಂಚನಾ ಮೊತ್ತವನ್ನು 2014-2015ರ ಅವಧಿಯಲ್ಲಿ ಹೂಡಿಕೆ ಮಾಡಲಾಗಿದೆ. ಷೇರುಗಳು ಮತ್ತು ಲಾಭಾಂಶದ ಭರವಸೆ ನೀಡಿ ಖಾಸಗಿ ಸಂಸ್ಥೆಯಲ್ಲಿ 25 ಲಕ್ಷ ರೂ. ಠೇವಣಿ ಇಡಲಾಗಿದೆ ಎಂಬ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ನೂರಾಡು ಪೆÇಲೀಸರು ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಹೆಚ್ಚಿನ ತನಿಖೆಯ ನಂತರವೇ ಈ ವಿಷಯ ಸ್ಪಷ್ಟವಾಗಲಿದೆ ಎಂದು ನೂರಾಡು ಪೋಲೀಸರು ತಿಳಿಸಿದ್ದಾರೆ.

