ಉಪ್ಪಳ: ಉಪ್ಪಳ ಸಮೀಪದ ಕುಬಣೂರಿನಲ್ಲಿ ಕರ್ನಾಟಕ ನಿರ್ಮಿತ ವಿದೇಶಿ ಮದ್ಯ ಮಾರಾಟ ಮಾಡುತ್ತಿದ್ದ ಯುವಕನನ್ನು ಕುಂಬಳೆ ಠಾಣೆ ಪೋಲೀಸರು ಬಂಧಿಸಿದ್ದಾರೆ. ಮಂಗಲ್ಪಾಡಿ ಪ್ರತಾಪನಗರ ನಿವಾಸಿ ಟಿ. ಅಭಿಷೇಕ್ (31) ಬಂಧಿತ.
ಖಚಿತ ಮಾಹಿತಿಯನ್ವಯ ಕುಂಬಳೆ ಠಾಣಾಧಿಕಾರಿ ವಿವಿ ಸಂತೋಷ್ ನೇತೃತ್ವದಲ್ಲಿ ಕುಬಣೂರು ಪರಿಸರದಲ್ಲಿರುವ ಎಟಿಎಸ್ ಮೈದಾನದಿಂದ ಆರೋಪಿಯನ್ನು ಬಂಧಿಸಲಾಗಿದೆ. ಈತನಿಂದ 180 ಮಿಲ್ಲಿ ಲೀ. ನ 24 ಪ್ಯಾಕೆಟ್ ಮದ್ಯ ವಶಪಡಿಸಲಾಗಿದೆ. ಈತ ತಲಪಾಡಿ ಸಏರಿದಂತೆ ಕರ್ನಾಟಕದ ವಿವಿಧ ಪ್ರದೇಶದಿಂದ ಮದ್ಯ ಖರೀದಿಸಿ ತಂದು ಅನಧಿಕೃತವಾಗಿ ಮಾರಾಟ ಮಾಡುವ ಜಾಲದ ವ್ಯಕ್ತಿಯಾಗಿದ್ದಾನೆಂದು ಪೆÇಲೀಸರು ತಿಳಿಸಿದ್ದಾರೆ.

