ಉಪ್ಪಳ: ಕುರ್ಚಿಪಳ್ಳ ಹಿಂದುಸ್ತಾನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ 'ಡಿಜಿಟಲ್ ಸ್ಕೂಲ್' ತರಗತಿಯ ಉದ್ಘಾಟನೆ ನಡೆಯಿತು. ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಮಾನ್ ಉದ್ಘಾಟಿಸಿದರು. ವಾರ್ಡ್ ಸದಸ್ಯೆ ನಜೀಮುನ್ನಿಸ ಅಧ್ಯಕ್ಷತೆ ವಹಿಸಿದ್ದರು. ಶಜಿನ ಟೀಚರ್ ತರಗತಿ ನಡೆಸಿಕೊಟ್ಟರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಮೊಯಿನ್, ಮಾತೃ ಸಮಿತಿ ಅಧ್ಯಕ್ಷೆ ಝೌರ, ಪ್ರಭಾರ ಮುಖ್ಯೋಪಾಧ್ಯಾಯಿನಿ ತಾಹಿರ, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಮತ್ತು ಮಕ್ಕಳು ಪಾಲ್ಗೊಂಡಿದ್ದರು. ಮುಖ್ಯೋಪಾಧ್ಯಾಯ ಪ್ಯಾಟ್ರಿಕ್ ಒರಿಗೋನಿ ಸ್ವಾಗತಿಸಿ, ತಾರಾ ಟೀಚರ್ ವಂದಿಸಿದರು. ಸವಿತ ಟೀಚರ್ ಕಾರ್ಯಕ್ರಮ ನಿರೂಪಿಸಿದರು.

