ಮುಂಬೈ: 'ದೇಶದ ಇತಿಹಾಸ ಮತ್ತು ಜ್ಞಾನವನ್ನು ವಸಾಹತುಶಾಹಿ ಮುಕ್ತಗೊಳಿಸುವುದು ಎಂದರೆ ಹಳೆಯದನ್ನು ಅಳಿಸಿಹಾಕುವುದು ಎಂದರ್ಥವಲ್ಲ; ಬದಲಾಗಿ, ಐತಿಹಾಸಿಕ ಸತ್ಯವನ್ನು ಭಾರತದ ದೃಷ್ಟಿಕೋನದಿಂದ ಜಗತ್ತಿಗೆ ಪ್ರಸ್ತುತಪಡಿಸುವುದೇ ಆಗಿದೆ' ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.
ಇಲ್ಲಿನ 'ಏಷಿಯಾಟಿಕ್ ಸೊಸೈಟಿ ಆಫ್ ಮುಂಬೈ'ನಲ್ಲಿ ಭಾನುವಾರ ಹಸ್ತಪ್ರತಿಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, 'ಭಾರತೀಯ ಜ್ಞಾನ, ಇತಿಹಾಸ, ಪರಂಪರೆ, ಭಾಷೆಗಳು, ಹಸ್ತಪ್ರತಿಗಳು ಮತ್ತು ಪತ್ರಾಗಾರಗಳನ್ನು ಸಂರಕ್ಷಿಸಬೇಕು ಹಾಗೂ ಭಾರತ ಮತ್ತು ಇಡೀ ವಿಶ್ವದ ಜನತೆಗೆ ತಲುಪಿಸಬೇಕು' ಎಂದು ಕರೆ ನೀಡಿದರು.
'ಭಾರತದ ಜ್ಞಾನಪರಂಪರೆಯನ್ನು ದೀರ್ಘ ಕಾಲದವರೆಗೆ ವಸಾಹತುಶಾಹಿ ದೃಷ್ಟಿಕೋನದಿಂದ ವ್ಯಾಖ್ಯಾನಿಸಲಾಗಿದ್ದು, ಕೀಳರಿಮೆ ಹುಟ್ಟಿಸಲು ಕಾರಣವಾಗಿತ್ತು. ಇಂದು ನಾವು ಜ್ಞಾನವನ್ನು ಆ ಚೌಕಟ್ಟಿನಿಂದ ಮುಕ್ತಗೊಳಿಸುವತ್ತ ಸಾಗುತ್ತಿದ್ದೇವೆ' ಎಂದರು.
-ಅಮಿತ್ ಶಾ, ಗೃಹ ಸಚಿವಮಹಾರಾಷ್ಟ್ರದಾದ್ಯಂತ ಮನೆಗಳಲ್ಲಿರುವ ಹಸ್ತಪ್ರತಿಗಳು ಮತ್ತು ಪೂರ್ವಜರ ದಾಖಲೆಗಳನ್ನು ಗುರುತಿಸಿ ಜ್ಞಾನ ಭಾರತಂ ರಾಷ್ಟ್ರೀಯ ಹಸ್ತಪ್ರತಿ ಮಿಷನ್ ಅಡಿ ತರಬೇಕು.

