ನವದೆಹಲಿ: ಕಾರ್ಪೊರೇಟ್ ಸಾಲಗಾರರಿಗೆ ವೈಯಕ್ತಿಕ ಖಾತರಿ ನೀಡುವವರಿಗೆ ಹೆಚ್ಚಿನ ಸುರಕ್ಷತೆ ನೀಡುವ ನಿಟ್ಟಿನಲ್ಲಿ ದಿವಾಳಿ ಪರಿಹಾರ ಪ್ರಕ್ರಿಯೆಯ ಮಾನದಂಡಗಳಿಗೆ ಕೆಲವು ತಿದ್ದುಪಡಿ ತರಲು ಭಾರತೀಯ ದಿವಾಳಿ ಮಂಡಳಿಯು (ಐಬಿಬಿಐ) ಶಿಫಾರಸು ಮಾಡಿದೆ.
ಖಾತರಿದಾರರಿಗೆ ಸಂಬಂಧಿಸಿದ ಪಕ್ಷಗಾರರಿಗೆ ಮರುಪಾವತಿ ಯೋಜನೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡುವುದು, ವೈಯಕ್ತಿಕ ಖಾತರಿದಾರರ ಆಸ್ತಿಯ ಮೌಲ್ಯಮಾಪನವನ್ನು ಕಡ್ಡಾಯಗೊಳಿಸುವುದು, ಸಾಲಗಾರರ ಅಭಿಪ್ರಾಯವನ್ನು ದಾಖಲಿಸಿಕೊಳ್ಳಲು ಚೌಕಟ್ಟುಗಳನ್ನು ರೂಪಿಸುವುದು, ಕಣ್ತಪ್ಪಿಸಿದ ವಹಿವಾಟನ್ನು ಗುರುತಿಸುವುದು ಮತ್ತು ವರದಿ ಮಾಡುವ ಕುರಿತು ಶಿಫಾರಸು ಮಾಡಲಾಗಿದೆ.
ಸದ್ಯ, ವೈಯಕ್ತಿಕ ಖಾತರಿದಾರರ ಸಹವರ್ತಿಗಳು ಮರುಪಾವತಿ ಯೋಜನೆಗೆ ಸಂಬಂಧಿಸಿ ಮತ ಚಲಾಯಿಸಲು ಅವಕಾಶವಿಲ್ಲ.
ಮಾಧ್ಯಮ ಕ್ಷೇತ್ರದ ಉದ್ಯಮಿ ಸುಭಾಷ್ ಚಂದ್ರ ಅವರ ಪ್ರಕರಣದಲ್ಲಿ ₹22,006 ಕೋಟಿ ಕ್ಲೇಮ್ಗೆ ಪ್ರತಿಯಾಗಿ ಸಾಲದಾತ ಕಂಪನಿಗಳಿಗೆ ₹6.5 ಕೋಟಿ ಪಾವತಿಸಿ ಇತ್ಯರ್ಥ ಮಾಡಿಕೊಳ್ಳುವ ಸೂತ್ರದ ಕಾರಣಕ್ಕೆ ಈ ಶಿಫಾರಸುಗಳನ್ನು ಮಾಡಲಾಗಿದೆ.

