HEALTH TIPS

ಯುಪಿಐ ಪಾವತಿಗೆ MDR: ತಡೆ ನೀಡಲು ನಿರಾಕರಿಸಿ, ಕೇಂದ್ರಕ್ಕೆ ನೋಟಿಸ್ ನೀಡಿದ SC

ನವದೆಹಲಿ: ಕೇಂದ್ರ ಸರ್ಕಾರವು ₹ 2,000 ಮೇಲ್ಪಟ್ಟ ಯುಪಿಐ ವಹಿವಾಟಿನ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್‌ (ಎಂಡಿಆರ್‌) ಶುಲ್ಕ ವಿಧಿಸುವ ನಿಟ್ಟಿನಲ್ಲಿ ಜಾರಿಗೆಗೊಳಿಸಲು ಮುಂದಾಗಿರುವ ನಿಯಮಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. 


ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್‌, ಈ ಸಂಬಂಧ ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿದೆ. 

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಹಾಗೂ ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ ಮತ್ತು ವಿ.ಮೋಹನಾ ಅವರನ್ನೊಳಗೊಂಡ ಪೀಠವು, ವಕೀಲರಾದ ಅಂಜನಾ ದತ್ತಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ವಿಚಾರಣೆ ನಡೆಸಿತು.

ಈ ವೇಳೆ ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಮಣ್, ಯುಪಿಐ ಬಳಸುವ ಶೇ 96ರಷ್ಟು ಜನರಿಗೆ ಶುಲ್ಕ ಹೇರಿಕೆಯಿಂದ ವಿನಾಯಿತಿ ಇದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠ, 'ಕಾನೂನಾತ್ಮಕ ವಿಚಾರಗಳಿಗಿಂತಲೂ ಹೆಚ್ಚಿನ ತಾಂತ್ರಿಕ ಅಂಶಗಳು ಇದರಲ್ಲಿ ಅಡಗಿವೆ' ಎಂದಿತು.

ಸರ್ಕಾರ ಹಾಗೂ ಸಂಬಂಧಿಸಿದವರಿಗೆ ಪೀಠವು ನೋಟಿಸ್‌ ಜಾರಿಗೊಳಿಸುತ್ತಿದ್ದಂತೆ, ಎಂಡಿಆರ್‌ಗೆ ತಡೆ ನೀಡುವಂತೆ ಅರ್ಜಿದಾರರು ಮನವಿ ಮಾಡಿದರು. ಆದರೆ, ಅದನ್ನು ಪರಿಗಣಿಸಲಿಲ್ಲ.

ಕಳೆದ ಆರು ವರ್ಷಗಳಿಂದ ಸಂಪೂರ್ಣ ಉಚಿತವಾಗಿದ್ದ ಯುಪಿಐ ಪಾವತಿಗೆ ಶುಲ್ಕ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ನಿಯಮವು ಅಕ್ಟೋಬರ್ 15ರಿಂದ ಜಾರಿಗೆ ಬರಲಿದೆ.

ಹೊಸ ನಿಯಮದ ಪ್ರಕಾರ, ವ್ಯಕ್ತಿಯಿಂದ ವ್ಯಕ್ತಿಗೆ ಮಾಡುವ ಪಾವತಿ (ಪಿ2ಪಿ) ಸಂಪೂರ್ಣ ಉಚಿತವಾಗಿರಲಿದ್ದು, ವ್ಯಕ್ತಿಯಿಂದ ವ್ಯಾಪಾರಿಗಳಿಗೆ ಮಾಡುವ ಪಾವತಿ (ಪಿ2ಎಂ) ₹ 2 ಸಾವಿರದವರೆಗೆ ಯಾವುದೇ ಶುಲ್ಕವಿಲ್ಲ. ಆದರೆ, ₹ 2 ಸಾವಿರಕ್ಕಿಂತ ಹೆಚ್ಚಿನ ಪಿ2ಎಂ (ವ್ಯಾಪಾರಿ) ಯುಪಿಐ ಪಾವತಿಗಳಿಗೆ ಶೇ 0.4 ಎಂಡಿಆರ್‌ ಅನ್ವಯವಾಗಲಿದೆ. ₹ 75 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಶುಲ್ಕವನ್ನು ಗರಿಷ್ಠ ₹ 300 ನಿಗದಿಪಡಿಸಲಾಗಿದೆ.

ನಿಗದಿತ ಅಗತ್ಯ ಸೇವೆಗಳ ಕ್ಷೇತ್ರಗಳಲ್ಲಿ ಪ್ರತಿ ವಹಿವಾಟಿಗೆ ₹ 5 ನಿಗದಿತ ಶುಲ್ಕ ಇರಲಿದೆ. ಬಂಡವಾಳ ಮಾರುಕಟ್ಟೆ ಸಂಬಂಧಿತ ಪಾವತಿಗಳಿಗೆ ಶೇ 0.02 ಶುಲ್ಕ ವಿಧಿಸಲಾಗುತ್ತದೆ. ತಿಂಗಳಿಗೆ ₹ 1 ಲಕ್ಷದವರೆಗೆ ಸ್ವೀಕರಿಸುವ ವ್ಯಾಪಾರಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries