HEALTH TIPS

ಪಾಟ್ನಾದಿಂದ ಲಕ್ನೋಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ 17 ಸಾವಿರ ಅಡಿ ಎತ್ತರದಲ್ಲಿ ಸಿಡಿಲು ಬಡಿತ!

ನವದೆಹಲಿ:  ಪಾಟ್ನಾದಿಂದ ಲಕ್ನೋಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ 17,000 ಅಡಿ ಎತ್ತರದಲ್ಲಿ ಸಿಡಿಲು ಬಡಿದ ಪರಿಣಾಮ ವಿಮಾನದ ಮುಂಭಾಗದಲ್ಲಿರುವ ರಾಡೋಮ್‌ ಗೆ (ರೇಡಾರ್ ಕವರ್) ಹಾನಿಯಾಗಿದೆ. ಘಟನೆ ಬಳಿಕ ವಿಮಾನವನ್ನು ಹಾರಾಟದಿಂದ ತಡೆಹಿಡಿಯಲಾಗಿದೆ ಎಂದು ತಿಳಿದು ಬಂದಿದೆ.


ಇಂಡಿಗೋದ 6E 625 ವಿಮಾನವು ಅ.7ರಂದು ಪಾಟ್ನಾದಿಂದ ಲಕ್ನೋಗೆ ತೆರಳುತ್ತಿತ್ತು. ಲ್ಯಾಂಡಿಂಗ್ ವೇಳೆ ವಿಮಾನವು ಆಲಿಕಲ್ಲು ಮಳೆಯಂತಹ ಪ್ರತಿಕೂಲ ಹವಾಮಾನವನ್ನು ಎದುರಿಸಿತು. ಈ ವೇಳೆ ರಾಡೋಮ್‌ಗೆ ಹಾನಿಯಾಗಿದೆ ಎಂದು ಇಂಡಿಗೋ ತಿಳಿಸಿದೆ.

ವಿಮಾನದಲ್ಲಿ 104 ಪ್ರಯಾಣಿಕರು ಹಾಗೂ ಆರು ಸಿಬ್ಬಂದಿ ಇದ್ದರು. ವಿಮಾನವು ನಿಗದಿತ ಸಮಯಕ್ಕಿಂತ ಎಂಟು ನಿಮಿಷ ಮುಂಚಿತವಾಗಿ ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು. ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿ ವಿಮಾನದಿಂದ ಕೆಳಗಿಳಿದರು.

ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಲಾಗಿದೆ. ವಿಮಾನಕ್ಕೆ ಅಗತ್ಯ ನಿರ್ವಹಣಾ ಕಾರ್ಯ ಕೈಗೊಳ್ಳಲಾಗುವುದು. ಸಂಬಂಧಿತ ಅನುಮೋದನೆಗಳನ್ನು ಪಡೆದ ಬಳಿಕವಷ್ಟೇ ವಿಮಾನ ಮತ್ತೆ ಕಾರ್ಯಾಚರಣೆ ಆರಂಭಿಸಲಿದೆ ಎಂದು ಇಂಡಿಗೋ ವಕ್ತಾರರು ತಿಳಿಸಿದ್ದಾರೆ.

ಘಟನೆ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ತನಿಖೆ ಆರಂಭಿಸಿದೆ.

ಕಳೆದ ತಿಂಗಳು ಗುವಾಹಟಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಟೇಲ್‌ಸ್ಟ್ರೈಕ್ ಅನುಭವಿಸಿತ್ತು. ಇಂಡಿಗೋ ಈ ಘಟನೆಯನ್ನು ದೃಢಪಡಿಸಿತ್ತು. A321neo ವಿಮಾನವು ಲ್ಯಾಂಡಿಂಗ್ ವೇಳೆ 'ಅಸಹಜ ರನ್‌ ವೇ ಸಂಪರ್ಕ' ಅನುಭವಿಸಿತ್ತು ಎಂದು ಸಂಸ್ಥೆ ತಿಳಿಸಿತ್ತು.

ಘಟನೆ ಬಳಿಕ ವಿಮಾನವನ್ನು ಹಾರಾಟದಿಂದ ತಡೆಹಿಡಿಯಲಾಗಿತ್ತು. ಕೆಟ್ಟ ಹವಾಮಾನವೇ ಘಟನೆಗೆ ಕಾರಣ ಎಂದು ಇಂಡಿಗೋ ಹೇಳಿತ್ತು.

ಗುವಾಹಟಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ 6E 6542 ವಿಮಾನವು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿರುಗಾಳಿಯ ವಾತಾವರಣದಲ್ಲಿ ಇಳಿಯುವಾಗ 'ಅಸಹಜ ರನ್‌ವೇ ಸಂಪರ್ಕ' ಎದುರಿಸಿತು ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿತ್ತು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries