HEALTH TIPS

ಮತಕಳ್ಳತನದ ಪಿತೂರಿ ಮೂಲಕ ದೇಶ ಹೈಜಾಕ್‌: 'ಇಂಡಿಯಾ' ಕೂಟದ ಆಕ್ರೋಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಮತ್ತು ಮುಖ್ಯ ಚುನಾವಣಾ ಆಯುಕ್ತರು 'ಮತ ಕಳ್ಳತನ'ದ ಕ್ರಿಮಿನಲ್‌ ಪಿತೂರಿಯ ಮೂಲಕ ದೇಶವನ್ನು ಹೈಜಾಕ್‌ ಮಾಡಿದ್ದಾರೆ ಎಂದು ಆರೋಪಿಸಿ ಗುರುವಾರ ಇಂಡಿಯಾ ಮೈತ್ರಿಕೂಟದ ಮುಖಂಡರು ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿದರು.  


ಬಿಜೆಪಿ ಸರ್ಕಾರ ಮತ್ತು ಮುಖ್ಯ ಚುನಾವಣಾ ಆಯುಕ್ತರಿಗೆ 'ಜ್ಞಾನೋದಯ'ವಾಗಲಿ ಎಂದು ಪ್ರಾರ್ಥಿಸಿದ ಮುಖಂಡರು, ಶುಕ್ರವಾರವೂ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಮತ್ತು ಬೆಳಿಗ್ಗೆ ಸಂಸತ್‌ ಭವನದಲ್ಲಿ ಸಭೆ ಸೇರುವುದಾಗಿ ತಿಳಿಸಿದ್ದಾರೆ. ಸಿಇಸಿ ರಾಜೀನಾಮೆ ಸಲ್ಲಿಸುವರೆಗೆ ಪ್ರತಿಭಟನೆ ಮುಂದುವರಿಯಲಿದೆ' ಎಂದು ಕೆಲವು ಮುಖಂಡರು ಹೇಳಿದ್ದಾರೆ.

'ಬಿಜೆಪಿ ಸರ್ಕಾರ ಮತ್ತು ಸಿಇಸಿಗೆ ಜ್ಞಾನೋದಯವಾಗಲಿ, ದೇಶದ ಪ್ರತಿಯೊಂದು ಮತ ಮತ್ತು ಪ್ರಜಾಪ್ರಭುತ್ವ ಉಳಿಯಲಿ ಎಂದು ನಾವು ಪ್ರಾರ್ಥಿಸಿದ್ದೇವೆ. ಮೋದಿ ಮತ್ತು ಅಮಿತ್ ಶಾ ಅವರು ಜ್ಞಾನೇಶ್‌ ಕುಮಾರ್‌ ಅವರನ್ನು ರಕ್ಷಿಸಲು ಪಣ ತೊಟ್ಟಿದ್ದಾರೆ. ಅವರು ಕೂಡ ಸಿಇಸಿ ಅವರೊಂದಿಗೆ ಮುಳುಗುತ್ತಾರೆ. ನಾವು ದೃಢನಿಶ್ಚಯದಿಂದ ಮುಂದುವರಿಯುತ್ತಿದ್ದೇವೆ' ಎಂದು ಕಾಂಗ್ರೆಸ್‌ ಮುಖಂಡ ಪವನ್‌ ಖೇರಾ ಹೇಳಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, 'ಮೋದಿ, ಅಮಿತ್‌ ಶಾ, ಸಿಇಸಿ ಮತ್ತು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಸಂವಿಧಾನವನ್ನು ನಾಶಪಡಿಸಿದ್ದಾರೆ. ಈ ಪಿತೂರಿಗಾಗಿ ಅವರನ್ನು ನ್ಯಾಯಾಲಯದ ಮುಂದೆ ನಿಲ್ಲಿಸಲಾಗುವುದು' ಎಂದರು.

ಗುರುವಾರವೂ ಭೋಜನ ಕೊಡಿಸಿದ ಖರ್ಗೆ

ಇಂಡಿಯಾ ಮೈತ್ರಿಕೂಟದ ಸಂಸದರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರವೂ ಭೋಜನ ಕೊಡಿಸಿದರು.ಕನ್ನಾಟ್‌ ಪ್ಲೇಸ್‌ ಸಮೀಪದ ಮೊಯೆಟ್ಸ್‌ ರೆಸ್ಟೋರೆಂಟ್‌ನಲ್ಲಿ ಊಟ ಸವಿದ ಮುಖಂಡರು, ಬಳಿಕ ಹವಾನಿಯಂತ್ರಿತ ಬಸ್‌ಗಳಲ್ಲಿ ರಾಜ್‌ಘಾಟ್‌ಗೆ ತೆರಳಿದರು. ಈ ಬಸ್‌ಗಳನ್ನು ಹಿಂಬಾಲಿಸಿದ ಕಾರ್ಯಕರ್ತರು ಹಲವು ಕಿ.ಮೀ ದೂರದಲ್ಲಿರುವ ರಾಜ್‌ಘಾಟ್‌ಗೆ ನಡೆದುಕೊಂಡು ಹೋದರು.

ಕಾಂಗ್ರೆಸ್‌ ಮುಖಂಡರಲ್ಲದೆ ಟಿಎಂಸಿಯ ಅಭಿಷೇಕ್‌ ಬ್ಯಾನರ್ಜಿ, ಮೇನಕಾ ಗುರುಸ್ವಾಮಿ, ಸಾಕೇತ್‌ ಗೋಖಲೆ, ಸಮೀರುಲ್‌ ಇಸ್ಲಾಂ, ಎಸ್‌ಪಿಯ ರಾಜೀವ್‌ ರಾಯ್‌, ಮೊಹಿಬುಲ್ಲಾ, ಸಿಪಿಐಎಂನ ಜಾನ್‌ ಬ್ರಿಟ್ಟಾಸ್‌, ಸಿಪಿಐನ ಸಂತೋಷ್‌, ಆರ್‌ಜೆಡಿಯ ಸುಧಾಕರ್‌ ಸಿಂಗ್‌ ಕೂಡ ಬೋಜನ ಕೂಟದಲ್ಲಿ ಭಾಗಿಯಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries