HEALTH TIPS

ರೈಲು ಪ್ರಯಾಣಿಕನ 40 ಸಾವಿರ ರೂ.ಗಳ ಮೊಬೈಲ್ ಫೋನ್ ಕಳವುಗೈದ ಆರೋಪಿ ಸೆರೆ

ಕಾಸರಗೋಡು: ರೈಲು ಪ್ರಯಾ ಣಿಕನ 40 ಸಾವಿರ ರೂಪಾ ಯಿಗಳ ಹಾಗೂ ೧೦ಸಾವಿರ ರೂಪಾಯಿಗಳ ಎರಡು ಮೊಬೈಲ್ ಫೋನ್‌ಗಳನ್ನು ಕಳವುಗೈದ ಆರೋಪಿಯನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಪನ್ನಿಪ್ಪಾರೆ ಮುಟ್ಟತ್ತೋಡಿ  ನಿವಾಸಿಯೂ ಕಾಞಂಗಾಡ್ ರೈಲ್ವೇ ನಿಲ್ದಾಣ ಸಮೀಪ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಕೆ.ಕೆ. ಅಬ್ದುಲ್ಲ (63) ಬಂಧಿತ ಆರೋಪಿ. ಕಳೆದ ತಿಂಗಳ ೨೮ರಂದು ನೇತ್ರಾವತಿ ಎಕ್ಸ್ ಪ್ರೆಸ್‌ರೈಲಿನಲ್ಲಿ ಕಲ್ಲಿಕೋಟೆಗೆ ಪ್ರಯಾಣಿಸುತ್ತಿದ್ದ ವೇಂಙೇರಿ ನಿವಾಸಿ ಸೂರ್ಯಕೃಷ್ಣ ಎಂಬವರ ಎರಡು ಮೊಬೈಲ್ ಫೋನ್‌ಗಳನ್ನು ಈತ ಕಳವು ನಡೆಸಿದಾನೆ.    ಮೊಬೈಲ್ ಫೋನ್‌ಗಳು ಕಳವಿಗೀಡಾದ  ಬಗ್ಗೆ  ಸೂರ್ಯಕೃಷ್ಣ ಕಾಸರಗೋಡು ರೈಲ್ವೇ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ    ಆರೋಪಿಯನ್ನು ಪತ್ತೆಹಚ್ಚಲಾಗಿದೆ.  ಆರೋಪಿಯ ಕೈಯಿಂದ 8 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳೆದೆರಡು ವರ್ಷಗಳಿಂದ  ಈತ ನಿರಂತರವಾಗಿ ರೈಲುಗಳಲ್ಲಿ ಕಳವು ನಡೆಸುತ್ತಿದ್ದನೆಂದೂ ಈತನ ವಿರುದ್ಧ ಹಲವು ಕೇಸುಗಳಿವೆಯೆಂದು ಪೊಲೀಸರು ತಿಳಿಸಿದ್ದಾರೆ.

ಕಲ್ಲಿಕೋಟೆ ರೈಲ್ವೇ ಪೊಲೀಸ್ ಇನ್‌ಸ್ಪೆಕ್ಟರ್ ಸಂತೋಷ್ ಕುಮಾರ್, ಕಾಸರಗೋಡು ರೈಲ್ವೇ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಕೆ. ರಾಜೀವನ್, ಸಬ್ ಇನ್‌ಸ್ಪೆಕ್ಟರ್ ಎಸ್. ಸನಿಲ್ ಕುಮಾರ್, ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ ಗಂಗಾಧರನ್, ಸಿವಿಲ್ ಪೊಲೀಸ್ ಆಫೀಸರ್ ಪಿ. ಸುಶಾಂತ್, ರೈಲ್ವೇ ಪ್ರೊಟೆಕ್ಷನ್ ಫೋರ್ಸ್  ಸಿ.ಪಿ.ಡಿ.ಎಸ್ ಸ್ಕ್ವಾಡ್ ಸದಸ್ಯರಾದ ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ ಕೆ.ಎಂ. ಶಿಜು, ಹೆಡ್ ಕಾನ್‌ಸ್ಟೇಬಲ್  ವಿ. ಶ್ರೀಕಾಂತ್, ಕಾನ್‌ಸ್ಟೇಬಲ್ ಗಳಾದ ಅಬ್ದುಲ್ ಸತ್ತಾರ್, ವಿ.ಟಿ. ರಾಜೇಶ್ ಎಂಬಿವರು ಒಳಗೊಂಡ ತಂಡ ಆರೋಪಿಯನ್ನು ಸೆರೆಹಿಡಿದಿದೆ. ಬಳಿಕ ಆರೋಪಿಗೆ  ನ್ಯಾಯಾಲಯ ರಿಮಾಂಡ್ ವಿಧಿಸಿದೆ.  





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries