ಮುಳ್ಳೇರಿಯ: ತಮ್ಮ ವಕೀಲ ವೃತ್ತಿಯೊಂದಿಗೆ ಕೃಷಿಕರ, ಶೋಷಿತ ವರ್ಗದ ಜನತೆಯ ಉನ್ನತಿಗಾಗಿ ದುಡಿದ ಮಾಜಿ ಸಂಸದ ಎಂ ರಾಮಣ್ಣ ರೈ ಅವರ ಆದರ್ಶ ನಮಗೆಲ್ಲರಿಗೂ ಮಾದರಿಯಾಗಿರುವುದಾಗಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ, ಮಾಜಿ ಶಾಸಕ ಎಂ ರಾಜಗೋಪಾಲನ್ ತಿಳಿಸಿದ್ದಾರೆ.
ಅವರು ಮುಳ್ಳೇರಿಯ ಸನಿಹದ ಗಾಡಿಗುಡ್ಡೆಯಲ್ಲಿ ಕಾಸರಗೋಡಿನ ಮಾಜಿ ಸಂಸದ ಎಂ. ರಾಮಣ್ಣ ರೈ ಅವರ 16ನೇ ಸಂಸ್ಮರಣಾ ಸಮಾರಂಭಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಸ್ಮೃತಿ ಮಂಟಪದಲ್ಲಿ ಪ್ರಭಾತ ಬೇರಿ ಮತ್ತು ಪುಷ್ಪಾರ್ಚನೆ ನಡೆಸಲಾಯಿತು. ಸಿಪಿಎಂ ವಲಯ ಕಾರ್ಯದರ್ಶಿ ಎಂ ಮಾಧವನ್ ಸ್ಮೃತಿ ಮಂಟಪದಲ್ಲಿ ಧ್ವಜಾರೋಹಣ ನಡೆಸಿದರು. ಸಿ.ಎಚ್ ರಾಮಚಂದ್ರನ್ ಅಧ್ಯಕ್ಷತೆ ವಹಿಸಿದರು. ಸಿಜಿ ಮ್ಯಾಥ್ಯು, ಎ ಪಿ ಕುಶಲನ್, ಎಂ ನಾಸರ್, ಸಿ ರಾಜನ್ ಉಪಸ್ಥಿತರಿದ್ದರು. ಕೆ ಪ್ರಕಾಶನ್ ಸ್ವಾಗತಿಸಿದರು. ಕಾರ್ಯಕ್ರಮದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಮಹಿಳೆಯರ ಸಹಿತ ನೂರಾರುಮಂದಿ ಪಾಲ್ಗೊಂಡಿದ್ದರು.


