ಕಾಸರಗೋಡು: ಪೋಕ್ಸೋ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಅಪರಾಧಿಗೆ, ಸಮಾನ ಪ್ರಕರಣದಲ್ಲಿ ಪೆÇೀಕ್ಸೋ ಪ್ರಕರಣದಲ್ಲಿ ನ್ಯಾಯಾಲಯ 46 ವರ್ಷಗಳ ಕಠಿಣ ಜೈಲುಶೀಕ್ಷೆ ಹಾಗೂ 62,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಹೊಸದುರ್ಗ ಪೂಂಜಾವಿ ನಿವಾಸಿ ಪಿ.ಎ. ಸಲೀಂ (37) ಎಂಬಾತನಿಗೆ ಹೊಸದುರ್ಗ ಕ್ಷಿಪ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪಿ.ಎಂ. ಸುರೇಶ್ ಅವರು ವಿವಿಧ ಸೆಕ್ಷನ್‍ಗಳಲ್ಲಾಗಿ ಈ ತೀರ್ಪು ನೀಡಿದ್ದಾರೆ. ದಂಡ ಪಾವತಿಸದಿದ್ದಲ್ಲಿ, ಅಪರಾಧಿ ಒಂದು ವರ್ಷ ಎರಡು ತಿಂಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.
ಮೂಲತಃ ಕೊಡಗು ನಾಪೆÇೀಕ್ಲು ನಿವಾಸಿಯಾಗಿರುವ ಸಲೀಂ, 2022 ಜೂನ್ 20ರಂದು ವೆಳ್ಳರಿಕುಂಡ್ ಪೆÇಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದ 14ರ ಹರೆಯದ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲಿ, ಆಕೆಯನ್ನು ಬೈಕ್‍ನಲ್ಲಿ ಅಡೂರು ಆಸುಪಾಸಿನ ಕಾಡಿಗೆ ಕರೆದೊಯ್ದು, ಒಂದಕ್ಕಿಂತ ಹೆಚ್ಚುಬಾರಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಮೇಲ್ಪರಂಬ ಠಾಣೆ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದರು. ನಂತರ ಡಿವೈಎಸ್ಪಿ ಉತ್ತಮ್‍ದಾಸ್ ಪ್ರಕರಣದ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
2024 ಮೇ 15ರಂದು ಬೆಳಗ್ಗೆ ಮನೆಯಲ್ಲಿ ನಿದ್ರಿಸುತ್ತಿದ್ದ ಹೊಸದುರ್ಗ ಆಸುಪಾಸಿನ 9ರ ಹರೆಯದ ಬಾಲಕಿಯನ್ನು ಎತ್ತಿಕೊಂಡು ಮನೆ ಸನಿಹದ ತೋಟವೊಂದಕ್ಕೆ ಕೊಂಡೊಯ್ದು ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲೂ ಸಲೀಂ ಆರೋಪಿಯಾಗಿದ್ದು, ಈ ಪ್ರಕರಣದಲ್ಲಿ ಆತನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕಣ್ಣೂರಿನ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಈತನಿಗೆ ಹೊಸದುರ್ಗ ಪರಿಸರದ 14ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ನ್ಯಾಯಾಲಯ 46 ವರ್ಷ ಕಠಿಣ ಸಜೆ ವಿಧಿಸಿದೆ.

