ಕಾಸರಗೋಡು: ಜಿಲ್ಲೆ ಒಳಗೊಂಡಂತೆ ಕೇರಳಾದ್ಯಂತ ಮಾದಕದ್ರವ್ಯ ಎಂಡಿಎಂಎ ಪೂರೈಸುವ ಜಾಲದ ಪ್ರಧಾನ ಆರೋಪಿಯಾಗಿರುವ ಐವರಿ ಕೋಸ್ಟ್ ಪ್ರಜೆ ಜಿನ್ ಪಿಯರ್ ಸೆ ಅಲಿಯಾಸ್ ಸ್ಯಾಮುವಲ್ ಒಪ್ಪಾನ (32)ಎಂಬಾತನನ್ನು ಉತ್ತರಪ್ರದೇಶ ನೋಯ್ಡಾದಿಂದ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ನಿತಿüನ್‍ರಾಜ್ ಮೇಲ್ನೋಟದಲ್ಲಿ ಹೊಸದುರ್ಗ ಡಿವೈಎಸ್ಪಿ ಎಂ.ವಿ. ಅನಿಲ್ ಕುಮಾರ್ ನೇತೃತ್ವದ ವಿಶೇಷ ಪೆÇಲೀಸ್ ತಂಡ ಕಾರ್ಯಾಚರಣೆ ನಡೆಸಿದೆ. ಆಗಸ್ಟ್ 9ರಂದು ಚಂದೇರ ಠಾಣೆ ಪೆÇಲೀಸರು ಕಾಲಿಕಡವಿನಲ್ಲಿ ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಆ ದಾರಿಯಾಗಿ ಬಂದ ಕಾರನ್ನು ತಡೆದು ತಪಾಸಣೆಗೊಳಪಡಿಸಿದಾಗ ಅದರಲ್ಲಿ 139.29 ಗ್ರಾಂ ಎಂಡಿಎಂಎ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಬಂಧಿಸಲಾಗಿದೆ.
ಈ ಮೂಲಕ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳ ಸಂಖ್ಯೆ 9ಕ್ಕೇರಿದೆ. ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಬಂಧಿತರಾಗಿದ್ದ ಇತರ ಆರೋಪಿಗಳ ಮೊಬೈಲ್ ಫೆÇೀನ್‍ಗಳನ್ನು ವೈಜ್ಞಾನಿಕ ರೀತಿಯಲ್ಲಿ ಪರಿಶೀಲಿಸಿದಾಗ ಇದರಲ್ಲಿ ಸ್ಯಾಮುವಲ್ ಒಪ್ಪಾನ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿತ್ತು. ಈತನ ಮೊಬೈಲ್ ಟ್ರೇಸ್ ಮಾಡುವ ಮೂಲಕ ವಿಶೇಷ ಪೆÇಲೀಸರ ತಂಡ ಉತ್ತರಪ್ರದೇಶದ ನೋಯ್ಡಾಕ್ಕೆ ತೆರಳಿ ಅಲ್ಲಿ ನಡೆಸಿದ ಗುಪ್ತ ಕಾರ್ಯಾಚರಣೆಯಲ್ಲಿ ಅಲ್ಲಿನ ಗುಪ್ತ ಸ್ಥಳವೊಂದರಲ್ಲಿ ಎಂಡಿಎಂಎ ತಯಾರಿಸುವ ಕೇಂದ್ರದಿಂದ ಈತನನ್ನು ಬಂಧಿಸಲಾಗಿದೆ. ಬಂಧಿತನಿಂದ 12 ಎಟಿಎಂ ಕಾರ್ಡ್‍ಗಳು, ಐದು ಮೊಬೈಲ್ ಫೆÇೀನ್‍ಗಳು ಹಾಗೂ 2.94 ಲಕ್ಷ ರೂ. ನಗದು ವಶಪಡಿಸಲಾಗಿದೆ. ಬಂಧಿತನು ಅಧಿಕೃತ ವಿಸಾದಲ್ಲಿ ಭಾರತಕ್ಕೆ ಆಗಮಿಸಿದ್ದು, ನಂತರ ವಿಸಾ ಕಾಲಾವಧಿ ಕಳೆದರೂ, ಅನಧಿಕೃತವಾಗಿ ವಾಸ್ತವ್ಯ ಹೂಡಿದ್ದನು.


