HEALTH TIPS

ಅಮೆರಿಕ ಚುನಾವಣೆಯಲ್ಲಿ ಎ.ಐ ಕಂಪನಿಗಳ ಹಣದಾಟ: ₹ 470 ಕೋಟಿಗೂ ಹೆಚ್ಚು ಖರ್ಚು

ವಾಷಿಂಗ್ಟನ್: 2026ರ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಎ.ಐ ಉದ್ಯಮ ಭಾರಿ ಪ್ರಭಾವ ಬೀರುತ್ತಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. 


ಎ.ಐ ಕ್ಷೇತ್ರದ ಪ್ರಮುಖ ಕಂಪನಿಗಳಾದ ಒಪನ್‌ಎಐ ಮತ್ತು ಆಂಥ್ರೋಪಿಕ್‌ ಬೆಂಬಲಿತ ರಾಜಕೀಯ ಗುಂಪುಗಳು ಅಭ್ಯರ್ಥಿಗಳ ಪರ ಪ್ರಚಾರ ಮತ್ತು ಮತದಾರರ ಸಂಪರ್ಕಕ್ಕಾಗಿ ಒಟ್ಟು 55.7 ಮಿಲಿಯನ್ ಡಾಲರ್‌ (ಸುಮಾರು ₹ 470 ಕೋಟಿ) ಖರ್ಚು ಮಾಡಿವೆ ಎಂದು 'ದಿ ನ್ಯೂಯಾರ್ಕ್ ಟೈಮ್ಸ್‌'ನ ವಿಶ್ಲೇಷಣೆ ತಿಳಿಸಿದೆ.

ಈ ಮೊತ್ತದ ಬಹುಪಾಲನ್ನು ಪಕ್ಷದೊಳಗೆ ನಡೆಯುವ ಪ್ರಾಥಮಿಕ ಚುನಾವಣೆಗಳಲ್ಲಿ ಖರ್ಚು ಮಾಡಲಾಗಿದೆ.

ಸುಮಾರು 52.6 ಮಿಲಿಯನ್ ಡಾಲರ್‌ (₹ 444 ಕೋಟಿಗೂ ಹೆಚ್ಚು) ಹಣವನ್ನು ಪಕ್ಷದ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಹೆಚ್ಚಿರುವ ಕ್ಷೇತ್ರಗಳಲ್ಲಿನ ಪ್ರಾಥಮಿಕ ಚುನಾವಣೆಗಳಿಗೆ ಖರ್ಚು ಮಾಡಲಾಗಿದೆ. ಈ ಚುನಾವಣೆಯಲ್ಲಿ ಪಕ್ಷದ ಪರವಾಗಿ ಅಂತಿಮವಾಗಿ ಯಾರು ಸ್ಪರ್ಧಿಸಬೇಕು ಎಂಬುದು ನಿರ್ಧಾರವಾಗುವುದರಿಂದ, ಎ.ಐ ಗುಂಪುಗಳು ಆರಂಭಿಕ ಹಂತದಲ್ಲೇ ತಮ್ಮ ಪ್ರಭಾವ ಬೀರುವ ಪ್ರಯತ್ನ ನಡೆಸಿವೆ.

ಡೆಮಾಕ್ರಟಿಕ್ ಅಭ್ಯರ್ಥಿಗಳ ಪರ ಸುಮಾರು 28 ಮಿಲಿಯನ್ ಡಾಲರ್‌ (₹ 236 ಕೋಟಿ) ಮತ್ತು ರಿಪಬ್ಲಿಕನ್ ಅಭ್ಯರ್ಥಿಗಳ ಪರ ಸುಮಾರು 19 ಮಿಲಿಯನ್ ಡಾಲರ್‌ (₹ 160 ಕೋಟಿ) ಖರ್ಚು ಮಾಡಲಾಗಿದೆ. ಎಐ ನಿಯಂತ್ರಣ, ಡೇಟಾ ಸೆಂಟರ್‌ಗಳ ವಿಸ್ತರಣೆ ಹಾಗೂ ಉದ್ಯೋಗದ ಮೇಲೆ ಎಐನ ಪರಿಣಾಮದ ಕುರಿತು ಅಮೆರಿಕದಲ್ಲಿ ಚರ್ಚೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ರಾಜಕೀಯ ಹಣದ ಹರಿವು ನಡೆದಿದೆ.

ಒಪನ್‌ಎಐಗೆ ಸಂಬಂಧಿಸಿದ 'ಲೀಡಿಂಗ್ ದ ಫ್ಯೂಚರ್' ಮತ್ತು ಆಂಥ್ರೊಪಿಕ್‌ಗೆ ಸಂಬಂಧಿಸಿದ 'ಪಬ್ಲಿಕ್ ಫಸ್ಟ್ ಆಯಕ್ಷನ್' ಸೇರಿದಂತೆ ನಾಲ್ಕು ಪ್ರಮುಖ ರಾಜಕೀಯ ಸಮಿತಿಗಳು ಈ ಹಣವನ್ನು ಚುನಾವಣಾ ಪ್ರಚಾರಕ್ಕೆ ಬಳಸಿವೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries