HEALTH TIPS

ಗ್ರೀನ್‌ ಕಾರ್ಡ್‌: ಇನ್ಫೊಸಿಸ್, ವಿಪ್ರೊ ಸೇರಿ 8 ಕಂಪನಿ ಅಮಾನತುಗೊಳಿಸಿದ ಅಮೆರಿಕ

ವಾಷಿಂಗ್ಟನ್‌:  ಎಚ್‌1ಬಿ ವೀಸಾದ ಅಡಿಯಲ್ಲಿ ಕೆಲಸಕ್ಕಾಗಿ ಅಮೆರಿಕಕ್ಕೆ ಬಂದಿರುವ ಉದ್ಯೋಗಿಗಳಿಗೆ ಕಂಪನಿ ವತಿಯಿಂದಲೇ ಗ್ರೀನ್‌ ಕಾರ್ಡ್‌ ಒದಗಿಸಿಕೊಡುವ ಯೋಜನೆಯಿಂದ (Permanent Labour Certification Programme - PERM) ಮೈಕ್ರೋಸಾಫ್ಟ್‌, ಟಾಟಾ, ಇನ್ಫೊಸಿಸ್, ವಿಪ್ರೊ ಸೇರಿದಂತೆ ಎಂಟು ಸಂಸ್ಥೆಗಳನ್ನು ಟ್ರಂಪ್‌ ಆಡಳಿತವು ಅಮಾನತುಗೊಳಿಸಿದೆ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ಗುರುವಾರ ತಿಳಿಸಿದ್ದಾರೆ.


ಶ್ವೇತಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಈ ಸಂಸ್ಥೆಗಳು ಅನುಸರಿಸುತ್ತಿರುವ ನೀತಿಯಿಂದಾಗಿ ಅಮೆರಿಕನ್ನರು ಉದ್ಯೋಗ ಮಾರುಕಟ್ಟೆಯಿಂದ ಹೊರಗುಳಿಯುವಂತಾಗಿದೆ. ಹೀಗಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಮೈಕ್ರೋಸಾಫ್ಟ್‌ ಸಂಸ್ಥೆಯು ತಾನು ವಜಾಗೊಳಿಸಿದ ಉದ್ಯೋಗಿಗಳ ಸ್ಥಾನಕ್ಕೆ ಒಂದೂವರೆ ಪಟ್ಟು ಹೆಚ್ಚಾಗಿ ವಿದೇಶಿ ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುವ ಮೂಲಕ ವಂಚನೆ ಎಸಗಿದೆ ಎಂದೂ ಅವರು ದೂರಿದ್ದಾರೆ. ಅಲ್ಲದೇ ಸ್ಥಳೀಯ ಅಮೆರಿಕನ್ ಉದ್ಯೋಗಿಗಳ ಹಿತರಕ್ಷಣೆಯ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಅಮೆರಿಕ ಕಾರ್ಮಿಕ ಇಲಾಖೆಯ ಆದೇಶ:

ವಿಶ್ವದ ಅತಿದೊಡ್ಡ ಐಟಿ ಸಂಸ್ಥೆಗಳಾದ ಕಾಗ್ನಿಜೆಂಟ್, ಇನ್ಫೊಸಿಸ್, ಟಾಟಾ, ವಿಪ್ರೊ, ಹೆಚ್‌ಸಿಎಲ್ ಮತ್ತು ಕ್ಯಾಪ್‌ಜೆಮಿನಿ, ಮೈಕ್ರೋಸಾಫ್ಟ್ ಹಾಗೂ ಅಡೋಬ್ ಸಂಸ್ಥೆಗಳನ್ನು ಕಾಯಂ ಕಾರ್ಮಿಕ ಪ್ರಮಾಣಪತ್ರ ಕಾರ್ಯಕ್ರಮದಿಂದ (PERM) ಅಮಾನತುಗೊಳಿಸುತ್ತಿದ್ದೇವೆ ಎಂದು ಅಮೆರಿಕದ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಕೀತ್ ಸೋಂಡರ್ಲಿಂಗ್ ಪ್ರಕಟಿಸಿದ್ದಾರೆ.

ಈ ಕಂಪನಿಗಳಿಗೆ ಸಂಬಂಧಿಸಿದಂತೆ ಯಾವುದೇ ಹೊಸ ಕಾಯಂ ಕಾರ್ಮಿಕ ಪ್ರಮಾಣಪತ್ರ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಹಾಗೂ ಪ್ರಸ್ತುತ ಬಾಕಿ ಇರುವ ಅರ್ಜಿಗಳನ್ನೂ ಪರಿಶೀಲಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

2009ರಿಂದ ಈ ಕಂಪನಿಗಳು ಸುಮಾರು 30 ಲಕ್ಷ ವಿದೇಶಿ ಉದ್ಯೋಗಿಗಳಿಗೆ ಮನವಿ ಸಲ್ಲಿಸಿವೆ. ಇವುಗಳಲ್ಲಿ 2, 30,00 ಸಾವಿರಕ್ಕೂ ಹೆಚ್ಚು ಎಚ್-1ಬಿ (H-1B) ವೀಸಾ ಅನುಮೋದನೆ ಪಡೆದುಕೊಂಡಿದ್ದು, 1 ಲಕ್ಷಕ್ಕೂ ಹೆಚ್ಚು ಶಾಶ್ವತ ಕಾರ್ಮಿಕ ಪ್ರಮಾಣಪತ್ರಗಳು ಲಭ್ಯವಾಗಿವೆ ಎಂದು ಸೋಂಡರ್ಲಿಂಗ್ ವಿವರಿಸಿದ್ದಾರೆ. ಅಲ್ಲದೇ ಈ ಪ್ರಕ್ರಿಯೆಯಿಂದಾಗಿ ಲಕ್ಷಾಂತರ ಅಮೆರಿಕನ್ನರು ಉದ್ಯೋಗ ಕಳೆದುಕೊಳ್ಳುವಂತಾಗಿದೆ ಎಂದು ಆರೋಪಿಸಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries